ಡಬ್ಬಿಂಗ್ ಮುಗಿಸಿದ ಬೆಟ್ಟದ ದಾರಿ

ಚಂದ್ರಕಲಾ ಟಿ.ಆರ್. ಹಾಗೂ ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ ಬೆಟ್ಟದ ದಾರಿ ಚಿತ್ರಕ್ಕೆ ಇತ್ತೀಚೆಗೆ ಮಾತುಗಳ ಧ್ವನಿಮುದ್ರಣ ಕಾರ್ಯ ಮುಕ್ತಾಯಗೊಂಡಿದೆ.

dsc_5867

ಸರ್ಕಾರದಿಂದಲೂ ಬಗೆಹರಿಸಲು ಸಾಧ್ಯವೇ ಇಲ್ಲ ಎನ್ನುವಂತಾ ನೀರಿನ ಸಮಸ್ಯೆಯನ್ನು ಐವರು ಹುಡುಗರು ಹೇಗೆ ಪರಿಹರಿಸುತ್ತಾರೆ ಅನ್ನೋ ಪ್ರಧಾನ ಎಳೆ ಈ ಚಿತ್ರದ ಕಥೆವೊಂದಿದೆ.

ಬಂಗಾರಿ ಮತ್ತು ಶಿವನ ಪಾದ ಸಿನಿಮಾಗಳನ್ನು ನಿರ್ದೇಶಿಸಿರುವ ಮಾ. ಚಂದ್ರು ನಿರ್ದೇಶನ ಮಾಡಿದ್ದು, ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತವಿದೆ.

_srs3814

ತಾರಾಗಣದಲ್ಲಿ ಮಾ. ನಿಶಾಂತ್ ಟಿ. ರಾಥೋಡ್, ಮಾ. ರಂಗನಾಥ್ ಯಾದವ್, ಮಾ. ರೋಹಿತ್, ಮಾ. ವಿಘ್ನೇಶ್, ಬೇಬಿ ಮಾನ್ಯತಾ ಎಂ. ನಾಯಕ್, ಮನದೀಪ್ ರಾಯ್, ರಮೇಶ್ ಭಟ್, ಉಮೇಶ್, ಮೈಸೂರು ಮಲ್ಲೇಶ್, ಆರ್. ನಾಗೇಶ್, ರಿಕ್ಕಿ, ಅಂಜಲಿ, ಮಂಜುಳಾ ರೆಡ್ಡಿ ಮುಂತಾದವರಿದ್ದಾರೆ.

ಶೀಘ್ರ ಜಗತ್ ಕಿಲಾಡಿ

ಲಯನ್ ಆರ್ ರಮೇಶ್‌ಬಾಬು ನಿರ್ಮಿಸಿರುವ ‘ಜಗತ್ ಕಿಲಾಡಿ’ ತೆರೆಗೆ ಬರಲು ಸಿದ್ದವಾಗಿದೆ. ಜಯಣ್ಣ ಕಂಬೈನ್ಸ್ ಸದ್ಯದಲ್ಲೇ  ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಿದೆ.

ಧೀರೇಂದ್ರ ನಿರ್ದೇಶಿಸಿರುವ  ಚಿತ್ರಕ್ಕೆ ವಿನಾಯಕರಾಮ ಕಲಗಾರು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ. ಗಿರಿಧರ್ ದಿವಾನ್ ಸಂಗೀತವಿದೆ. ನಿರಂಜನ್‌ಕುಮಾರ್ ಶೆಟ್ಟಿ ಅಮಿತಾ ಕುಲಾಳ್, ಜೈಜಗದೀಶ್, ವಿಶ್ವ, ರವಿಚೇತನ್, ಕೌಂಡಿನ್ಯ, ಮೈಕೋ ನಾಗರಾಜ್ ಮುಂತಾದವರಿದ್ದಾರೆ.

Leave a Comment