ಡಕೋಟಾ ಬಸ್ – ವಿದ್ಯಾರ್ಥಿಗಳ ಪರದಾಟ

ರಾಯಚೂರು.ಜ.30- ಬಸ್ ತಳ್ಳುವ ಮೂಲಕ ಸ್ಟಾರ್ಟ್ ಮಾಡಿಕೊಂಡು ಶಾಲೆಗೆ ಹೋಗುವ ದುಸ್ಥಿತಿಯಲ್ಲಿ ಪಬ್ಲಿಕ್ ಶಾಲಾ ಮಕ್ಕಳದ್ದಾಗಿದೆ.
ನಗರದ ಹೊರ ವಲಯದಲ್ಲಿರುವ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬಸ್ ಮಧ್ಯ ರಸ್ತೆಯಲ್ಲಿ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಬಸ್‌ನಲ್ಲಿರುವ 20 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಡಕೋಟಾ ಬಸ್ ತಳ್ಳಿ, ಸ್ಟಾರ್ಟ್ ಮಾಡಬೇಕಾಯಿತು. ನಡುರಸ್ತೆಯಲ್ಲಿ ಬಸ್ ಹಿಂಬದಿಯಿಂದ ಮಕ್ಕಳು ಬಸ್ ತಳ್ಳುವುದು ಅತ್ಯಂತ ಅಪಾಯಕಾರಿಯಾಗಿದ್ದರೂ, ನಡುರಸ್ತೆಯಲ್ಲಿ ಚಿಕ್ಕ ಮಕ್ಕಳು ಬಸ್ ತಳ್ಳುವ ಹರಸಾಹಸಕ್ಕಿಳಿಯಬೇಕಾಯಿತು.
ಶಾಲಾಡಳಿತ ಮಂಡಳಿ ಇಂತಹ ಡಕೋಟಾ ಬಸ್ ನಿರ್ವಹಿಸುತಿರುವುದಾದರೂ ಏಕೆ ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿರುವ ಈ ಶಾಲೆ ಸುಸಜ್ಜಿತ ಬಸ್ ನಿರ್ವಹಿಸದಿರುವುದು ಪಾಲಕರ ಅಸಮಾಧಾನಕ್ಕೆ ಕಾರಣವಾಗಿದೆ. ಗೋನಾಳ ಸುತ್ತಮುತ್ತಲಿನ ಗ್ರಾಮಸ್ಥರು ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.

Leave a Comment