ಠೇವಣಿ ಹಿಂದಿರುಗಿಸಲು ಆಗ್ರಹಿಸಿ ಹೂಡಿಕೆದಾರರ ಧರಣಿ

ದಾವಣಗೆರೆ.ನ.22; ನಗರದ ಲಕ್ಷ್ಮೀಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಲಿಮಿಟೆಡ್ ಆಡಳಿತ ಮಂಡಳಿ ವಿರುದ್ದ ಸಿಡಿದೆದ್ದ ಹೂಡಿಕೆದಾರರು ಕೂಡಲೇ ಠೇವಣಿ ಮಾಡಿದ 20 ಕೋಟಿ ರೂ ಹಣವನ್ನು ಪಾವತಿ ಮಾಡಬೇಕೆಂದು ಒತ್ತಾಯಿಸಿ ನಗರದ ಜಯದೇವ ವೃತ್ತದ ಬಳಿಯಿರುವ ಸೋಸೈಟಿ ಮುಂಭಾಗದಲ್ಲಿಂದು ಧರಣಿ ನಡೆಸಿದರು.
ಠೇವಣಿದಾರರ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದ 1500 ಹೂಡಿಕೆದಾರರು ತಮ್ಮ ಹಣ ಹಿಂದಿರುಗಿಸುವಂತೆ ಆಗ್ರಹಿಸಿದರು. ಶ್ರೀ ಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿಯಲ್ಲಿ ಆಕರ್ಷಕ ಬಡ್ಡಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಬಂಡವಾಳ ಹೂಡಿಕೆ ಮಾಡಿಕೊಳ್ಳಲಾಗಿದೆ.ಬಡವರು, ಮಧ್ಯಮ ವರ್ಗದವರು, ಮಹಿಳೆಯರು ಹಾಗೂ ನಿಮೃತ್ತಿ ಹೊಂದಿದ್ದ ನೌಕರರು ತಮ್ಮ ಜೀವಮಾನದ ಉಳಿತಾಯದ ಹಣವನ್ನು ಸೋಸೈಟಿಯ ಆಡಳಿತ ಮಂಡಳಿಯವರು ಠೇವಣಿಯಾಗಿ ಮಾಡಿಕೊಂಡಿದ್ದಾರೆ.ಅದರಲ್ಲಿ ಖಾಯಂ ಠೇವಣಿ ಹಾಗೂ ಸುಭದ್ರ ನಗದು ಪತ್ರ ಠೇವಣಿ ರೂಪದಲ್ಲಿ ಸೋಸೈಟಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿದೇರ್ಶಕರಾಗಿರುವ ಡಾ.ಎಸ್.ಆರ್ ಹೆಗಡೆ ಹಾಗೂ ವ್ಯವಸ್ಥಾಪಕ ಪಿ.ಕೆ ಸತೀಶ್ ಸಹಿ ಮಡಿರುವ ಬಾಂಡ್ ಗಳನ್ನು ವಿತರಿಸಲಾಗಿದೆ. ಠೇವಣಿ ಮೊತ್ತವನ್ನು ಆಕರಣೆಗೊಂಡ ಬಡ್ಡಿಯೊಂದಿಗೆ ಮರು ಪಾವತಿ ಅವಧಿಯೊಳಗೆ ನೀಡಬೇಕಾಗಿದೆ.ಆದರೆ ಈಗಾಗಲೇ ಅವಧಿ ಮುಗಿದ ಖಾಯಂ ಠೇವಣಿ ಅಥವಾ ಸುಭದ್ರ ಠೇವಣಿಯನ್ನು ಬಡ್ಡಿಯೊಂದಿಗೆ ನೀಡುವಂತೆ 2017 ರಿಂದಲೂ ಠೇವಣಿದಾರರು ಆಡಳಿತ ಮಂಡಳಿ ಮನವಿ ಮಾಡಿದರೂ ಸಹ ಇದುವರೆಗೂ ವಾಪಾಸು ನೀಡಿಲ್ಲ.ನಿದೇರ್ಶಕ ಡಾ.ಎಸ್ ಆರ್ ಹೆಗಡೆ ಅವರಿಗೆ ಕೇಳಿದರೆ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ.ಇಲ್ಲಿಯವರೆಗೂ ಯಾವುದೇ ಠೇವಣಿದಾರರಿಗೆ ಹಣ ಮರುಪಾವತಿ ಮಾಡಿಲ್ಲ.ಇದರಿಂದ ಗ್ರಾಹಕರಿಗೆ ಆಘಾತವಾಗಿದೆ. ಸೋಸೈಟಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ವರ್ತನೆಗೆ ಖಂಡಿಸಿದ ಪ್ರತಿಭನಾಕಾರರು ಅನೇಕ ವರ್ಷಗಳಿಂದ ಠೇವಣಿ ಮೊತ್ತವನ್ನು ಹಿಂದಿರುಗಿಸುವಂತೆ ಕೇಳಿದರೂ ಸಹ ಕೇವಲ ಸಬೂಬುಗಳನ್ನು ಹೇಲುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ವೇದಿಕೆ ಅಧ್ಯಕ್ಷ ಬಂಡಿವಾಳ್, ಬೂಸ್ನೂರು ಶಿವಯೋಗಿ, ವೇದಮೂರ್ತಿ, ಕೃಷ್ಣ ಮೂರ್ತಿ, ನಾಗರಾಜ್ ರಾವ್, ಜಗನ್ನಾಥ ರಾವ್,ದಿಬ್ದಳ್ಳಿ ಚಂದ್ರಶೇಖರ್, ಇತರರಿದ್ದರು.

Leave a Comment