ಠಾಣೆಯಲ್ಲಿ ಮದುವೆಯಾಗಿ ಕೈ ಕೊಟ್ಟ ಪತಿ

ಕಲಬುರಗಿ ಸೆ 22: “ಹತ್ತು ವರ್ಷಗಳಿಂದ ಪ್ರೇಮಿಸಿ, ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಮದುವೆಯಾಗಿದ್ದೇವೆ. ಆದರೆ ಪತಿ ಈಗ ನನಗೆ ಕೈ ಕೊಟ್ಟು ಬೇರೆ ಮದುವೆ ಆಗಲು ಸಿದ್ಧತೆ ನಡೆಸಿದ್ದಾರೆ.”
ಹೀಗೆಂದು ನುಡಿದ ಎಂಬಿಎ ಪದವಿಧರೆ ವಾಡಿ ನಿವಾಸಿ ,ಶಿಲ್ಪಾ ವಿಶಾಲ್ (27) ಇಂದು ಸುದ್ದಿಗೋಷ್ಠಿಯಲ್ಲಿ ತಮಗಾದ ಅನ್ಯಾಯ ಕುರಿತು ಅಳಲು ತೋಡಿಕೊಂಡರು.
ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿರುವ,ಖಾಸಗಿ ಉದ್ಯೋಗಿಯಾದ ವಿಶಾಲ್ ಚವ್ಹಾಣ್ ಮದುವೆಯಾಗುವದಾಗಿ ನಂಬಿಸುತ್ತ,ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಎರಡು ಸಲ ಗರ್ಭಪಾತ ಸಹ ಮಾಡಿಸಿದ್ದಾರೆ.ಅವರನ್ನೇ ನಂಬಿ ಬೆಂಗಳೂರು ಪುಣೆ ಅಂತ ಅಲೆದಾಡಿದ್ದೇನೆ.ಮೋಹಪಾಶಕ್ಕೆ ಬಿದ್ದು ಸರ್ವಸ್ವವನ್ನು ಅರ್ಪಿಸಿದ್ದೇನೆ. ಈಗ ದಾರಿ ಕಾಣದಾಗಿದೆ.ನಾನು ಜೀವಂತ ಇರುವಾಗಲೇ ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿದರು.
ಕಳೆದ ಆಗಸ್ಟ್ 1 ರಂದು ವಾಡಿ ಪೊಲೀಸ್ ಠಾಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ವಿಶಾಲ್ ತಾಳಿ ಕಟ್ಟಿ ಹಾರ ಬದಲಿಸಿ ಮದುವೆಯಾಗಿದ್ದಾರೆ. ಎಂಟು ದಿನಗಳೊಳಗೆ ಮದುವೆ ನೋಂದಣಿ ಮಾಡಿಕೊಳ್ಳುವದಾಗಿ ಪೊಲೀಸ ಠಾಣೆಗೆ ಲಿಖಿತ ಪತ್ರ ನೀಡಿದ್ದಾರೆ. ಆದರೆ ಈಗವರು ಸಂಪರ್ಕಕ್ಕೆ ಸಿಗುತ್ತಿಲ್ಲ.ಈಗ ಅವರ ಕುಟುಂಬದವರು ಬೇರೆ ಮದುವೆಯ ಸಿದ್ಧತೆ ನಡೆಸಿದ್ದು, ಹಣದ ಆಮಿಷ ನೀಡಿ ಸಂಬಂಧ ಕಡಿದುಕೊಳ್ಳುವ ಮಾತಾಡಿದ್ದಾರೆ. ಇದರಿಂದ ನೊಂದ ನಮ್ಮ ತಂದೆ ಪಾಶ್ರ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ ಎಂದರು..

Leave a Comment