ಟ್ರ್ಯಾಕ್ಟರ್ ಟ್ರ್ಯಾಲಿ ಕದ್ದ ಆರೋಪಿಗಳ ಬಂಧನ

ಹರಿಹರ.ಮೇ.15; ಮನೆಯ ಮುಂಭಾಗ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹರಿಹರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಸವರಾಜ್ (30) ಹಾಗೂ ರವಿಕುಮಾರ್ (34) ಬಂಧಿತ ಆರೋಪಿಗಳು. ಈ ಇಬ್ಬರು ಹರಗವಳ್ಳಿ ಶಿಕಾರಿಪುರ ತಾಲ್ಲೂಕಿನವರಾಗಿದ್ದು. ಮಲೆಬೆನ್ನೂರು , ಹೊನ್ನಾಳಿ, ಬಸವಾಪಟ್ಟಣ ಮತ್ತು ಇತರೆ ಭಾಗಗಳಲ್ಲಿ ರೈತರ ಮನೆಯ ಮುಂದೆ ನಿಲ್ಲಿಸಿದ ಟ್ರ್ಯಾಕ್ಟರ್ ನ ಹಿಂಬದಿಯ ಟ್ರ್ಯಾಲಿ ಗಳನ್ನು ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಕಳುವಾದ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೋಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಒಟ್ಟು 15 ಲಕ್ಷ ರೂ ಮೌಲ್ಯದ ಒಟ್ಟು 6 ಟ್ರ್ಯಾಕ್ಟರ್ ಮತ್ತು ಟ್ರ್ಯಾಲರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆರ್ ಚೇತನ್, ಹೆಚ್ಚುವರಿ ಅಧೀಕ್ಷಕ ಉದೇಶ್, ಇವರ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಉಪಾಧೀಕ್ಷಕರಾದ ಚಿಕ್ಕ ಸ್ವಾಮಿ ನೇತೃತ್ವದಲ್ಲಿ ಹರಿಹರ ವೃತ್ತ ನಿರೀಕ್ಷಕರಾದ ಈರಣ್ಣ ಸಿದ್ದಪ್ಪ ಗುರುನಾಥ್, ಪಿಎಸ್ ಐ ಪ್ರಭು ಡಿ ಕೆಳಗಿನಮನಿ ಮತ್ತು ಸಿಬ್ಬಂದಿಗಳನ್ನೊಳಗೊಂಡಂತೆ ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿಗಳಾದ ಪ್ರಕಾಶ್, ಮಂಜುನಾಥ, ಲಿಂಗರಾಜ್, ರಾಘವೇಂದ್ರ, ದ್ವಾರಕೀಶ್, ನೀಲಮೂರ್ತಿ, ರಾಜಶೇಖರ, ದಿಳ್ಯಪ್ಪ ಸಿರಿಗೆರೆ, ರಿಜ್ವಾನ್ ನಾಸೂರ್, ಫಕೃದ್ದಿನ್ ಅಲಿ, ಕನ್ನಪ್ಪ, ಶಿವಪದ್ಮ ಸುಶೀಲಮ್ಮ, ಹರಿಹರ ಠಾಣೆಯ ಎಲ್ಲರಿಗೂ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Comment