ಟ್ರ್ಯಾಕ್ಟರ್ ಟ್ಯಾಂಕರ್ ಡಿಕ್ಕಿ: ಚಾಲಕ ಸಾವು

ವಿಜಯಪುರ ಆ 12: ತರಕಾರಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಇಂದು ಬೆಳಿಗ್ಗೆ ಜುಮನಾಳ ಹತ್ತಿರ ಸಂಭವಿಸಿದೆ.
ಮೃತಪಟ್ಟ ಟ್ರ್ಯಾಕ್ಟರ್ ಚಾಲಕ ಜುಮನಾಳ ಗ್ರಾಮದ ಮಲ್ಲಪ್ಪ ಪವಾರ ( 29) ಎಂದು ತಿಳಿದು ಬಂದಿದೆ.
ಜುಮನಾಳ ಗ್ರಾಮದಿಂದ ವಿಜಯಪುರಕ್ಕೆ ತರಕಾರಿ ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಟ್ರ್ಯಾಕ್ಟರ್ ನಲ್ಲಿದ್ದ ತರಕಾರಿಗಳು ರಸ್ತೆ ತುಂಬ ಚಲ್ಲಾಡಿವೆ
ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment