ಟ್ರ್ಯಾಕ್ಟರ್‌ನಿಂದ ಬಿದ್ದು ಮೃತ್ಯು

ಮಂಗಳೂರು, ಅ.೧೬- ಚಲಿಸುತ್ತಿದ್ದ  ಟ್ರ್ಯಾಕ್ಟರ್‌ನಿಂದ ಕೆಳಬಿದ್ದು ಅದರ ಚಕ್ರದಡಿಗೆ ಸಿಲುಕಿದ ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಒರಿಸ್ಸಾ ಮೂಲಕ ಮುಕುಟ್ ಟಿರ್ಕಿ(೧೬) ಮೃತಪಟ್ಟ ಕಾರ್ಮಿಕ. ನಿನ್ನೆ ವಿಟ್ಲ ಮೂಡ್ನೂರು ಗ್ರಾಮದ ಪೈಸಾರಿ ಎಂಬಲ್ಲಿ ಅಜ್ಜಿನಡ್ಕ ಚಂದಳಿಕೆ ರಸ್ತೆಯಲ್ಲಿ ಯಂತ್ರೋಪಕರಣವಾದ ಕಂಪ್ರೆಷರ್ ಟ್ರ್ಯಾಕ್ಟರ್ ಅನ್ನು ಅದರ ಚಾಲಕ ರಘು ಎಂಬವರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಮುಕುಟ್ ಟಿರ್ಕಿ ಟ್ರ್ಯಾಕ್ಟರ್ ಟೂಲ್ಸ್ ಬಾಕ್ಸ್ ಮೇಲೆ ಕುಳಿತಿದ್ದ ಎನ್ನಲಾಗಿದೆ. ಟ್ರ್ಯಾಕ್ಟರ್ ಮುಂದಕ್ಕೆ ಚಲಿಸುತ್ತಿದ್ದಂತೆಯೇ ಮುಕುಟ್ ಟಿರ್ಕಿ ಟ್ರ್ಯಾಕ್ಟರ್‌ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಬಳಿಕ ಇವರನ್ನು ದೇರಳಕಟ್ಟೆ ಆಸ್ವತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕ್ಸಿತೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment