ಟ್ರೆಕ್ಕಿಂಗ್‌ನಲ್ಲಿ ಟೀಂ ಇಂಡಿಯಾ

ಸತತ ೧೯ ಟೆಸ್ಟ್ ಪಂದ್ಯ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಟೀಮ್ ಇಂಡಿಯಾಗೆ ಪುಣೆ ಟೆಸ್ಟ್ ಪಂದ್ಯ ಸೋಲು ಭಾರಿ ಹೊಡೆತ ನೀಡಿದ್ದು ನಿಜ. ಆದರೆ ಗೆಲುವಿನ ಹಾದಿಗೆ ಮರಳಲು ಟೀಂ ಇಂಡಿಯಾ ಮಾಡಿದ್ದೇನು ಗೊತ್ತಾ..? ಅದೇ ಟ್ರೆಕ್ಕಿಂಗ್ ಹೊರಟ ನಂತರ ಗೆಲುವಿನ ನಗೆ ಬೀರಿದ್ದುನ್ನು ಇಲ್ಲಿ ಸ್ಮರಿಸಬಹುದು.

೧೯ ಟೆಸ್ಟ್ ಗೆದ್ದು ಬೀಗುತ್ತಿದ್ದ ಟೀಂ ಇಂಡಿಯಾಗೆ ಒಂದು ಸೋಲು ನಿಜಕ್ಕೂ ಅತೀವ ನೋವನ್ನು ಕೊಟ್ಟಿತ್ತು. ಆ ನೋವಿನಿಂದ ಹೊರಬರಲು ಟೀಮ್ ಮ್ಯಾನೇಜ್ಮೆಂಟ್ ಮಾಸ್ಟರ್ ಪ್ಲಾನ್ ಮಾಡಿ ಆಟಗಾರರನ್ನ ಟ್ರೆಕ್ಕಿಂಗ್ ಕಳುಹಿಸಿ ಕೊಟ್ಟಿತ್ತು.

ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಆಟಗಾರರು ಯಶಸ್ವಿಯಾಗಿ ತಹ್ಮಿಣಿ ಘಾಟ್ ಟ್ರೆಕ್ಕಿಂಗ್ ಮುಗಿಸಿ ಬಂದಿದ್ದಾರೆ. ವಿಶೇಷ ಅಂದ್ರೆ, ಟೀಮ್‌ಇಂಡಿಯಾ ಆಟಗಾರರೊಂದಿಗೆ ಪತ್ನಿಯರು ಕೂಡ ಸಾಥ್ ನೀಡಿ ಅವರಿಗೆ ಹುಮ್ಮಸ್ಸು ನೀಡಿದ್ದರು. ನಾಯಕ ವಿರಾಟ್ ಕೊಹ್ಲಿ, ಆರ್ ಅಶ್ವಿನ್, ಅಭಿನವ್ ಮುಕುಂದ್, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ ಹಾಗು ಪತ್ನಿ ರಾಧಿಕ, ಉಮೇಶ್ ಯಾದವ್ ಹಾಗು ಪತ್ನಿ ತಾನ್ಯ ಕೂಡ ಟೀಮ್‌ಇಂಡಿಯಾ ಟ್ರೆಕ್ಕಿಂಗ್‌ನಲ್ಲಿ ಪಾಲ್ಗೊಂಡಿದ್ದು ವಿಶೇಷ.

ಪುಣೆ ಸಮೀಪವಿರುವ ತಹ್ಮಿಣಿ ಘಾಟ್ ವಿಶ್ವಪ್ರಸಿದ್ಧ ಪ್ರವಾಸಿ ಸ್ಥಳ. ಪ್ರಕೃತಿಯನ್ನು ಆರಾಧಿಸೋ ಪ್ರತಿಯೊಬ್ಬನಿಗೂ ಈ ತಾಣ ಹೊಸ ಚೈತನ್ಯ ನೀಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಟ್ರೆಕ್ಕಿಂಗ್‌ನಿಂದ ಆಟಗಾರರು ಬೂಸ್ಟ್ ಆಗಿದ್ದಾರೆ ಎಂದರೆ ತಪ್ಪಗಲಾರದು. ಟ್ರೆಕ್ಕಿಂಗ್ ಹೋರಟ ಆಟಗಾರರು ಸಾಕಷ್ಟು ಮೋಜು ಮಸ್ತಿಯೊಂದಿಗೆ ಆಟಕ್ಕೆ ಬೇಕಾದ ರೀತಿಯಲ್ಲೂ ತಾಲೀಮು ನಡೆಸಿದ್ದರು. ಮಾರ್ಗ ಮಧ್ಯ ಕೆಲಕಾಲ ವಿಶ್ರಾಂತಿ ಮೊರೆ ಹೋದರು ನಿಗದಿತ ಸಮಯಕ್ಕೆ ಗುರಿ ತಲುಪವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಪ್ರತಿದಿನ ಇಂತಹ ಅವಕಾಶಗಳು ಸಿಗಲಿ ಎಂಬ ಆಶೀರ್ವಾದವಿರಲಿ, ಕೃತಜ್ಞರಾಗಿ ಮುಂದುವರೆಯೋಣ ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡರು. ಅದೇ ರೀತಿ ಅಜಿಂಕ್ಯ, ಜಡೇಜಾ ಎಲ್ಲಾರು ಸಂದೇಶ ರವಾನಿಸಿ ಪರ್ವತದ ಮೇಲೆ ಕ್ರಿಕೆಟಿಗರ ಚಟುವಟಿಕೆ ಗರಿಗದರಿದೆ. ಇದು ನಿಜಕ್ಕೂ ಕಲಿಯಲು ಹಾಗೂ ಮಸ್ತಿ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಅನಿಸಿಕಿ ಹಂಚಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ನಮ್ಮ ಆಟಗಾರರು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶವನ್ನು ನೀಡುವಲ್ಲಿ ವಿಫಲರಾಗಿದ್ದರು. ಅನಂತರ ಪಂದ್ಯದ ಸಾಧಕ ಹಾಗೂ ಬಾಧಕಗಳ ಬಗ್ಗೆ ತಂಡ ಗಮನ ಹರಿಸಿತ್ತು. ಪ್ರವಾಸಿ ತಂಡ ಉತ್ತಮವಾಗಿ ಆಡಿದ ಪರಿಣಾಮ ಮೊದಲ ಪಂದ್ಯದಲ್ಲಿ ಜಯ ಸಾಧಿಸಿತು, ಇದನ್ನು ಮನಗೊಂಡು ಆಟಗಾರರಲ್ಲಿ ಇಂತಹ ಪ್ರಯೋಗ ಮಾಡಲಾಯಿತು ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ತಿಳಿಸಿದ್ದರು.

ಪುಣೆ ಸೋಲಿಗೆ ತಂಡದ ಪ್ರತಿ ಆಟಗಾರರನು ಕಾರಣ. ನಾವು ಒಬ್ಬ ಆಟಗಾರನಿಗೆ ಬೆರಳು ತೋರಿಸಿ ಹೇಳುವುದು ತಪ್ಪಾಗುತ್ತದೆ. ಎರಡನೇ ಟೆಸ್ಟ್‌ನಲ್ಲಿ ಕಳೆದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು, ಆಡಬೇಕು. ಎಲ್ಲರ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶವನ್ನು ನೀಡಿದರೆ ಗೆಲುವು ಸಾಧಿಸಬಹುದು. ಇನ್ನು ನಾವು ಹಿನ್ನಡೆ ಅನುಭವಿಸಿದ ಕ್ಷೇತ್ರದಲ್ಲಿ ಈಬಾರಿ ಹೆಚ್ಚು ತಾಲೀಮು ನಡೆಸಲಾಗಿದೆ. ಅಲ್ಲದೆ ತಂಡದ ಆಟಗಾರರು ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳಲು ಟ್ರ್ಯಾಕಿಂಗ್ ಸಹ ನಡೆಸಿ ಅವರನ್ನು ತಯಾರಿ ಮಾಡಲಾಗಿತ್ತು ಎಂದು ಕುಂಬ್ಳೆ ಅವರು ಹೇಳಿದ್ದರು.

Leave a Comment