ಟ್ರಕ್, ಓಮ್ನಿ ಡಿಕ್ಕಿ-ಮೂವರ ದುರ್ಮರಣ

ಬಾಗಲಕೋಟ, ಸೆ8- ಓಮ್ನಿ ವ್ಯಾನ್ ಟ್ರಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಧೋಳ ನಗರದಲ್ಲಿಇಂದು ಬೆಳಿಗ್ಗೆ ಸಂಭವಿಸಿದೆ.
ಓಮ್ನಿಯಲ್ಲಿದ್ದ ಕಾಶಿಂಸಾಬ ಮುಜಾವರ (42) ಅಫ್ರಿನಾ ಮುಜಾವರ (35) ಹಾಗೂ ಶಬಾನಾ ಅಹ್ಮದ್ (38) ಎಂಬುವರೇ ಮೃತ ದುರ್ದೈವಿಗಳು
ಮೃತಪಟ್ಟವರೆಲ್ಲರೂ ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದವರು.
ದುಡಿಯಲೆಂದು ಗೋವಾಕ್ಕೆ ತೆರಳಿದ್ದ ಇವರು ವಿಜಯಪುರಕ್ಕೆ ಓಮ್ನಿ ವ್ಯಾನ್‌ನಲ್ಲಿ ಮರಳುತ್ತಿದ್ದಾಗ ಮುಧೋಳ ನಗರದಲ್ಲಿ ಎದುರಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಓಮ್ನಿ ಚಾಲಕ ನಿದ್ರೆಯ ಮಂಪರಿನಲ್ಲಿದ್ದರೆನ್ನಲಾಗಿದೆ.
ಸ್ಥಳಕ್ಕೆ ಬಾಗಲಕೋಟ ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Leave a Comment