ಟ್ರಂಕ್‌ಗೆ 25ರ ಸಂಭ್ರಮ

 ಜಿವಿ ಅಯ್ಯರ್ ಮೊಮ್ಮಗಳು ರಿಶಿಕಾಶರ್ಮಾ ಮೊದಲಬಾರಿ ನಿರ್ದೇಶನ ಮಾಡಿರುವ ’ಟ್ರಂಕ್ ಇಪ್ಪತೈದು ದಿನಗಳನ್ನು ಪೂರೈಸಿದೆ.ಕುತೂಹಲ, ಹಾರರ್ ಮತ್ತು  ಥ್ರಿಲ್ಲರ್ ಮಾದರಿಯ ಕತೆಯಾಗಿದ್ದ ಟ್ರಂಕ್‌ನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ಸಿನಿಮಾ ಸ್ಪರ್ಶ ನೀಡಿದ ಟ್ರಂಕ್‌ನಲ್ಲಿ  ಹಾಲಿವುಡ್ ಚಿತ್ರಕ್ಕೆ ಕೆಲಸ ಮಾಡಿರುವ ಗೋಸ್ಟ್ ಹಂಟರ್‍ಸ್ ತಂಡವು ನಟನೆ ಮಾಡಿರುವುದು ವಿಶೇಷವಾಗಿತ್ತು.

 ಕತೆಯು ಒಂದು ಟ್ರಂಕ್ ಸುತ್ತ ಸಾಗಲಿದೆ. ಮನುಷ್ಯತ್ವ  ಹಾಗೂ ಮನುಷ್ಯತ್ವ ಇಲ್ಲದ  ನಕರಾತ್ಮಕ ಪ್ರತಿಕ್ರಿಯೆಗಳು ಆತನ ಜೀವನದಲ್ಲಿ ಬಂದಾಗ ಏಳು-ಬೀಳುಗಳನ್ನು ಕಾಣುತ್ತಾನೆ. ಅದು ಏತಕ್ಕಾಗಿ ಎಂಬುದನ್ನು ಪರದೆ ಮೇಲೆ ತೋರಿಸಿರುವ  ಪ್ರಯತ್ನಕ್ಕೆ ಪ್ರೇಕಕ್ಷಕರು ಫಿದಾ ಆಗಿದ್ದಕ್ಕೆ ಸುಲಲಿತವಾಗಿ ೨೫ ದಿನ ಪೂರೈಸಿ ಯಶಸ್ವಿಯಾಗಿ ಮುಂದಕ್ಕೆ ಹೋಗುತ್ತಿದೆ.  ಧಾರವಾಡದ ನಿಹಾಲ್ ಮೃಧು  ಸ್ವಭಾವದ ಪಾತ್ರದಲ್ಲಿ ನಾಯಕ ಮತ್ತು  ವೈಶಾಲಿದೀಪಕ್ ನಾಯಕಿಯಾಗಿ ಯಶಸ್ಸುಗಳಿಸಿದ್ದಾರೆ.

ಅಜ್ಜಿ ಪಾತ್ರದಲ್ಲಿ ಸುಂದರಶ್ರೀ, ನಾಯಕನ ತಾಯಿಯಾಗಿ ಅರುಣ್‌ಬಾಲ್‌ರಾಜ್ ನಟನೆ ಇದೆ.  ನಾಲ್ಕು ಹಾಡುಗಳಿಗೆ ಕಾರ್ತಿಕ್,ಪ್ರದೀಪ್ ಮತ್ತು ಗಣೇಶನ್ ರಾಗ ಸಂಯೋಜನೆ,  ಆಲ್ವಿನ್‌ಡೊಮೋನಿಕ್ ಹಿನ್ನಲೆ ಸಂಗೀತ ನೀಡಿದ್ದಾರೆ.  ಜನರು ಸಿನಿಮಾ ನೋಡಲು ಸಿದ್ದರಿದ್ದರೆ, ಚಿತ್ರಮಂದಿರ ಸಮಸ್ಯೆ ಇದೆ. ಅಂಬರೀಷ್ ಮಧ್ಯೆ ಪ್ರವೇಶಿಸಿದ್ದರಿಂದ ಮಲ್ಟಿಪ್ಲಕ್ಸ್‌ನವರು ಪ್ರದರ್ಶನ ಮಾಡಲು ಅವಕಾಶ ಮಾಡಿಕೊಟ್ಟರು ಎಂಬುದಾಗಿ ನಿರ್ದೇಶಕಿ ಅವರ ಸಹಕಾರವನ್ನು ನೆನಸಿಕೊಳ್ಳುತ್ತಾರೆ.

ಮಾದ್ಯಮದವರ ಉತ್ತಮ ವಿಮರ್ಶೆ, ಜನರ  ಪ್ರಶಂಸೆಯಿಂದ ಬಂಡವಾಳ ವಾಪಸ್ಸು ಬರುತ್ತಿದೆ ಎಂದು  ನಿರ್ಮಾಪಕ ರಾಜೇಶ್‌ಭಟ್ ಖುಷಿಯಾಗಿ ಹೇಳಿಕೊಂಡರು.  ಇದೇ ತಂಡದಿಂದ ಮತ್ತೊಂದು ಚಿತ್ರ ಮಾಡಲು ಸಿದ್ದತೆಗಳು  ನಡೆಯುತ್ತಿದೆ.

Leave a Comment