ಟ್ಯಾಂಕಿಗೆ ತಂತಿ ಬೇಲಿ ಅಳವಡಿಸಿ

ರಾಯಚೂರು.ಮೇ.19- ವಾರ್ಡ್ ನಂ.3 ರ ವ್ಯಾಪ್ತಿಯಲ್ಲಿ ಬರುವ ರಾಮನಗರ ಗುಡ್ಡದ ಮೇಲೆ ನಿರ್ಮಿಸಲ್ಪಟ್ಟಿರುವ ಜಿ.ಎಲ್.ಆರ್. ವಾಟರ್ ಟ್ಯಾಂಕಿಗೆ ತಂತಿ ಬೇಲಿ ಅಳವಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ಜನ ಸೈನ್ಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.

ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ರಾಮನಗರದ ಗುಡ್ಡದ ಮೇಲೆ ಈಗಾಗಲೇ ನಿರ್ಮಿಸಲ್ಪಟ್ಟಿರುವ ಜಿ.ಎಲ್.ಆರ್. ಕುಡಿಯುವ ನೀರಿನ ಟ್ಯಾಂಕಿಗೆ ತಂತಿ ಬೇಲಿ ಅಳವಡಿಸಿ ಸ್ವಚ್ಛತೆ ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿರುವ ಪ್ರದೇಶದಲ್ಲಿ ಯಾವುದೇ ಮನೆ ನಿರ್ಮಿಸಬಾರದು. ಆದರೆ, ಮನೆ ನಿರ್ಮಾಣಕ್ಕೆ ಮುಂದಾದಲ್ಲಿ ಅನಾಹುತಗಳು ಸಂಭವಿಸುವ ಲಕ್ಷಣಗಳು ಗೋಚರಿಸುತ್ತವೆ. ಈ ನಿಟ್ಟನಲ್ಲಿ ಸಾರ್ವಜನಿಕರ ಹಿತಾದೃಷ್ಟಿಯಿಂದ ಟ್ಯಾಂಕ್‌ಗೆ ತಂತಿ ಬೇಲಿ ಅಳವಡಿಸಿ, ಭದ್ರತೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಟ್ಯಾಂಕಿಗೆ ತಂತಿ ಬೇಲಿ ಅಳವಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಮುಂದೆ ನಡೆಯುವ ಅನಾಹುತಕ್ಕೆ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.  ಸಂದರ್ಭದಲ್ಲಿ ವೆಂಕಟೇಶ, ಮಲ್ಲಿಕಾರ್ಜುನ, ರಾಜು, ಈರಣ್ಣ, ವೆಂಕಟೇಶ, ಎನ್. ಶಾಂತಕುಮಾರ ಇತರರು ಉಪಸ್ಥಿತರಿದ್ದರು.

Leave a Comment