ಟೋಕಿಯೊದಲ್ಲಿ ಬಿಕರಿ ಒಂದು ಮೀನು ಬರೋಬ್ಬರಿ 21 ಕೋಟಿ ರೂ.ಗೆ ಹರಾಜು

ಒಂದು ಮೀನಿನ ಬೆಲೆ ಎಷ್ಟಿರ ಬಹುದು ? ಒಂದು ಸಾವಿರ, ಒಂದು ಲಕ್ಷ ಅಥವಾ ಒಂದು ಕೋಟಿ ರೂ. ಇರಬಹುದು ಎಂದು ನೀವು ಭಾವಿಸಿದ್ದರೆ ನಿಮ್ಮ ಕಲ್ಪನೆ ತಪ್ಪು. ಉದಯ ರವಿ ನಾಡು ಜಪಾನ್‌ನಲ್ಲಿ ಒಂದು ಮೀನು ಬರೋಬ್ಬರಿ 21 ಕೋಟಿ ರೂಪಾಯಿಗೆ ಹರಾಜಿನಲ್ಲಿ ಬಿಕರಿಯಾಗಿದೆ. ಇದು ಸೋಜಿಗವೆಂದರೂ ಇದು ಸತ್ಯ.

ದಶಕಗಳಷ್ಟು ಹಳೆಯದಾದ ತ್ಸುಕಜಿ ಜಪಾನಿನ ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ವಿಶ್ವದ ಅತಿದೊಡ್ಡ ಮೀನಿನ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಈ ಹೊಸ ಮೀನಿನ ಮಾರುಕಟ್ಟೆ ಆರಂಭವಾಯಿತು.

ತುನಾ ಎಂಬ ತಳಿಯ ಮೀನು ಅಳಿವಿನ ಅಂಚಿನಲ್ಲಿದೆ. ಈ ಮೀನು ರಾಜಧಾನಿ ಟೋಕಿಯೋದಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ಇಷ್ಟೊಂದು ದುಬಾರಿ ಬೆಲೆಗೆ ಬಿಕರಿಯಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಷ್ಟೇ ಅಲ್ಲ ೨೦೧೩ರ ಹೊಸ ವರ್ಷದ ಆರಂಭದಲ್ಲಿ ನಡೆದ ಬಹಿರಂಗ ಹರಾಜಿಗಿಂತ ದುಪ್ಪಟ್ಟು ಬೆಲೆಗೆ ಮಾರಾಟವಾಗಿರುವುದು ವಿಶೇಷ.

ಹೊಸ ವರ್ಷದಲ್ಲಿ ನಡೆದ ಬಹಿರಂಗ ಹರಾಜು ಇದಾಗಿದ್ದು, ೨೭೮ ಕೆ.ಜಿ. ತೂಕವಿರುವ ಈ ತುನಾ ಮೀನನ್ನು ಕಿಯೋಮುರಾ ಕಾರ್ಪೋರೇಷನ್ನಿನ ಮಾಲೀಕ ಕಿಯೋಶಿ ಕಿಮುರಾ ೨೧ ಕೋಟಿ ರೂವರೆಗೆ ಹರಾಜು ಕೂಗಿ ವಿನಾಶದ ಅಂಚಿನಲ್ಲಿರುವ ತುನಾ ಮೀನು ಖರೀದಿಸಿದ್ದಾರೆ. ಟೋಕಿಯೋದ ತ್ಸುಕಜಿ ಮೀನಿನ ಮಾರುಕಟ್ಟೆ ವಿಶ್ವದಲ್ಲೇ  ಅತಿದೊಡ್ಡ ಮೀನಿನ ಮಾರುಕಟ್ಟೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಈ ಮಾರುಕಟ್ಟೆಯನ್ನು ನೂತನ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದ್ದು, ಇಲ್ಲಿ ಇನ್ನೂ ಕೆಲವು ಮಳಿಗೆಗಳು ಖಾಲಿ ಉಳಿದಿವೆ.

kiyoshi-kimura-701x394

ನೇಪಥ್ಯಕ್ಕೆ ಸರಿಯಲಿರುವ ಮಾರುಕಟ್ಟೆಯ ಗತ ವೈಭವ ಸಾರುವಂತೆ ಜಾಗತಿಕ ಮಟ್ಟದಲ್ಲಿ ದಾಖಲೆ ಬೆಲೆಗೆ ಮೀನು ಮಾರಾಟವಾಗಿರುವುದು. ಅಚ್ಚರಿಯ ವಿಷಯವೇ ಸರಿ. ತುನಾ ತಳಿಯ ೮೮ ಕೆ.ಜಿ. ತೂಕದ ಮೀನು ೪೦ ಪೌಂಡ್‌ಗಳಿಗೆ ಮಾರಾಟ ವಾಗುವುದು ಸಾಮಾನ್ಯ ಸಂಗತಿ. ಆದರೆ ವರ್ಷಾಂತ್ಯದ ಹೊತ್ತಿಗೆ ೨೦೦ ಪೌಂಡಗಳವರೆಗೆ ಏರಿಕೆಯಾಗಿದೆ. ಪ್ರಮುಖವಾಗಿ ಉತ್ತರ ಜಪಾನಿನ ಓಮಾದಲ್ಲಿ ಮೀನಿನ ಬೆಲೆ ದುಬಾರಿಯಾಗಿರುವುದು ವಿಶೇಷ.

ವಿನಾಶದ ಅಂಚಿನಲ್ಲಿರುವ ಈ ಅಪರೂಪದ ಮೀನು ಉತ್ತಮ ಗುಣಮಟ್ಟದಿಂದ ಕೂಡಿದೆ. ಹೀಗಾಗಿ ಎಷ್ಟೇ ದುಬಾರಿ ಹಣ ತೆತ್ತಾದರೂ ಖರೀದಿಸಲು ಸಿದ್ದನಿದ್ದೆ ಎಂದು ಕಿಮುರಾ ಹೇಳುತ್ತಾರೆ.

ಟೋಕಿಯೋ ನಗರ ೨೦೨೦ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾ ಕೂಟಕ್ಕೆ ಅಣಿಯಾಗುತ್ತಿದೆ. ಈ ಜಾಗತಿಕ ಮಟ್ಟದ ಕ್ರೀಡಾಕೂಟಕ್ಕಾಗಿ ಹಳೆಯ ಮೀನಿನ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ತ್ಸುಕಿಜಿ ಮಾರುಕಟ್ಟೆ ಇರುವ ಸ್ಥಳದಲ್ಲಿ ಕ್ರೀಡಾಕೂಟ ಆರಂಭವಾದ ಸಂದರ್ಭದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಿದೆ.

ದಶಕಗಳಷ್ಟು ಹಳೆಯದಾದ ತ್ಸುಕಜಿ ಜಪಾನಿನ ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ವಿಶ್ವದ ಅತಿದೊಡ್ಡ ಮೀನಿನ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಈ ಹೊಸ ಮೀನಿನ ಮಾರುಕಟ್ಟೆ ಆರಂಭವಾಯಿತು. ಆದರೆ ಕೆಲ ೫೦೦ ಕ್ಕೂ ಸಗಟು ಮೀನಿನ ವ್ಯಾಪಾರಿಗಳು ಹೊಸ ಮಾರುಕಟ್ಟೆಗೆ ವರ್ಗಾವಣೆ ಗೊಂಡಿದ್ದಾರೆ. ಇನ್ನೂ ಕೆಲ ವ್ಯಾಪಾರಿಗಳು ತ್ಸುಕಜಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿವೆ.

ಹೀಗಾಗಿ ಈ ಮಾರುಕಟ್ಟೆಯಲ್ಲಿ ನೂತನ ವರ್ಷದಲ್ಲಿ ನಡೆದ ಕೊನೆಯ ಹರಾಜು ನಡೆದ ಕಾರಣ ಮೀನಿನ ಹರಾಜಿನಲ್ಲಿ ತುನಾ ಮೀನು ಖರೀದಿಸಲು ಪ್ರಬಲ ಪೈಪೋಟಿ ಕಂಡು ಬಂದಿತ್ತು. ಆದರೆ ಹರಾಜಿನಲ್ಲಿ ಎಲ್ಲರನ್ನೂ ಹಿಂದಕ್ಕೆ ಹಾಕಿ ಉದ್ಯಮಿ ಕಿಮುರಾ ೨೧ ಕೋಟಿ ರೂ.ಗೆ ಈ ಮೀನನ್ನು ಖರೀದಿಸಿ ಎಲ್ಲರನ್ನು ಬೆರಗು ಗೊಳಿಸಿದರು.

Leave a Comment