ಟೊರಾಂಟೋದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೇ ದಂಡ

ಟೊರಾಂಟೋ, ಏ ೩- ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತಿರುಗಾಡುವ ಜನರಿಗೆ ಗರಿಷ್ಠ ೩೫೦೦ ಡಾಲರ್ ವರೆಗೆ ದಂಡ ವಿಧಿಸಲು ಟೊರಾಂಟೋ ನಗರಾಡಳಿತ ಮುಂದಾಗಿದೆ.

ಒಂದೇ ಕುಟುಂಬದವರಲ್ಲದ ವ್ಯಕ್ತಿಗಳ ನಡುವೆ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಗರಿಷ್ಠ ೩೫೦೦ ಡಾಲರ್ ವರೆಗೆ ದಂಢ ವಿಧಿಸಬಹುದಾಗಿದೆ ಎಂದು ಟೊರಾಂಟೋ ನಗರಾಡಳಿತ ತಿಳಿಸಿದೆ.

ಒಟ್ಟಿಗೆ ವಾಸಿಸದೇ ಯಾರೇ ಇಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಪಾರ್ಕ್ ಗಳಲ್ಲಿ ಕನಿಷ್ಠ ಎರಡು ಮೀಟರ್ ಅಂತರ ಕಾಯ್ದುಕೊಳ್ಳದಿದ್ದರೆ ಅವರಿಗೆ ಸಿ೫೦೦೦ ಡಾಲರ್ (೩೫೩೮ ಅಮೆರಿಕನ್ ಡಾಲರ್) ನಷ್ಟು ದಂಡ ವಿಧಿಸಬಹುದಾಗಿದೆ. ಕೊರೊನಾ ವೈರಾಣು ಸೋಂಕು ನಿಯಂತ್ರಣಕ್ಕೆ ಕೆನಡಾ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ತುರ್ತು ದಂಡ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸಾರ್ವಜನಿಕರ ಆರೋಗ್ಯ ಅಧಿಕಾರಿಗಳ ಸಲಹೆಯನ್ನು ಕೆನಡಾದ ಜನತೆ ಲಘುವಾಗಿ ಪರಿಗಣಿಸಿದ್ದಾರೆ ಎಂದು ಎಲ್ಲ ಮಟ್ಟದ ಸರ್ಕಾರದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆನಡಾದಲ್ಲಿ ಕೊರೊನಾ ವೈರಾಣು ಸೋಂಕಿತರ ಸಂಖ್ಯೆ ೧೦೪೬೬ ಕ್ಕೆ ಏರಿಕೆಯಾಗಿದ್ದು ಸಾವನ್ನಪ್ಪಿದವರ ಸಂಖ್ಯೆ ೧೧ ಕ್ಕೆ ಏರಿಕೆಯಾಗಿದೆ ಎಂದು ಸಾರ್ವಜನಿಕ ಆರೋಗ್ಯಾಧಿಕಾರಿ ಡಾ. ಥೆರೇಸಾ ಟಾಮ್ ತಿಳಿಸಿದ್ದರು.

Leave a Comment