ಟೊಮ್ಯಾಟೊ ಜ್ಯೂಸ್ ಪ್ರಯೋಜನ

 

ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಟೊಮ್ಯಾಟೊ ಜ್ಯೂಸ್ ಅತ್ಯಂತ ರುಚಿಕರ ಹಾಗೂ ಆರೋಗ್ಯಕರ. ಯಾವುದೇ ಸಮಯದಲ್ಲಿ ಈ ಜ್ಯೂಸನ್ನು ಸಿದ್ಧಪಡಿಸಿ ಮನೆ ಮಂದಿಯಲ್ಲಾ ಕುಡಿಯಬಹುದು. ಈ ಜ್ಯೂಸನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಅಂತ ತಿಳಿಯೋಣ.

ಹೇರಳವಾಗಿರುವ ಕಬ್ಬಿಣಾಂಶ- ಇದರಲ್ಲಿ ಜೀವಸತ್ವ ಎ, ಬಿ, ಸಿ ಅಪಾರವಾಗಿರುತ್ತದೆ. ಮನೆಯಲ್ಲಿ ತಯಾರಿಸಿದ ಸಿಂಪಲ್ ಟೊಮ್ಯಾಟೊ ಜ್ಯೂಸ್ ನಲ್ಲಿ ದೇಹಕ್ಕೆ ಅಗತ್ಯವಿರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣಾಂಶ ಹೇರಳವಾಗಿರುತ್ತದೆ.

ವಸಡಿನ ಆರೋಗ್ಯ- ಟೊಮ್ಯಾಟೊ ಪಾನೀಯ ವಸಡು ಹಾಗೂ ದವಡೆಯನ್ನು ಆರೋಗ್ಯವಾಗಿರಿಸುತ್ತದೆ.

ಸುಕ್ಕುಗಳು ಮಾಯ- ಈ ಜ್ಯೂಸ್ ನೊಂದಿಗೆ ಮೂಲಂಗಿ ರಸ ಹಾಗೂ ಕ್ಯಾರೆಟ್ ರಸ ಸೇರಿಸಿ ಸೇವಿಸುವುದರಿಂದ ಮುಖದ ಸುಕ್ಕುಗಳು ಮಾಯವಾಗುತ್ತವೆ.

Leave a Comment