ಟೆಸ್ಟ್ ಸರಣಿಯಲ್ಲೂ ಇದೇ ರೀತಿ ಆಡುತ್ತೇನೆ: ಮಯಾಂಕ್

 

ಹ್ಯಾಮಿಲ್ಟನ್, ಫೆ 16- ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನವಾದ ಇಂದು ಕರ್ನಾಟಕದ ಮಯಾಂಕ್ ಅಗರ್‌ವಾಲ್ ೯೯ ಎಸೆತಗಳಲ್ಲಿ ೮೧ ರನ್ ಗಳಿಸಿ ಭರ್ಜರಿ ಆಟವಾಡಿದರು. ಇಂದಿನ ಅವರ ಜನುಮ ದಿನದಂದೆ ಅರ್ಧಶತಕ ಸಿಡಿಸಿದ್ದು ವಿಶೇಷವಾಗಿತ್ತು. ಇದರ ನಡುವೆ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡಿತ್ತು.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಲಯಕ್ಕೆ ಮರಳಿರುವ ಮಯಾಂಕ್ ಅಗರ್‌ವಾಲ್ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿ, ನನ್ನ ಬ್ಯಾಟಿಂಗ್ಗೆ ಅಗತ್ಯವಾದ ಕಡೆಗಳಲ್ಲಿ ಹೆಚ್ಚು ಕಾರ್ಯನಿರ್ವಹಿಸಿದ್ದೇನೆ. ಇಲ್ಲಿನ ವಾತಾವರಣದಲ್ಲಿ ಆಡುವುದು ವಿಭಿನ್ನತೆಯಿಂದ ಕೂಡಿದೆ. ಆದರೆ, ಈ ಹಿಂದೆ ನಡೆದಿರುವ ಅಂಶಗಳನ್ನು ಮರೆತು ಆಡುತ್ತೇನೆ. ಅಭ್ಯಾಸ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ೮೧ ರನ್ ಗಳಿಸಿದ್ದೇನೆ. ಟೆಸ್ಟ್ ಪಂದ್ಯದಕ್ಕೆ ಇದನ್ನು ವಿಶ್ವಾಸವಾಗಿ ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ.

ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಸಹಾಯದಿಂದ ನನಗೆ ಅಗತ್ಯವಾದ ತಾಂತ್ರಿಕ ಕೌಶಲಗಳ ಮೇಲೆ ಹೆಚ್ಚಿನ ಗಮನ ಹರಿಸಿದ್ದೇನೆ ಎಂದು ಮಯಾಂಕ್ ಉಲ್ಲೇಖಿಸಿದ್ದಾರೆ. ನನ್ನ ಬ್ಯಾಟಿಂಗ್ ವಿಚಾರದಲ್ಲಿ ಅಗತ್ಯವಾದ ತಾಂತ್ರಿಕ ಅಂಶಗಳ ಬಗ್ಗೆ ನಾನು ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸರ್ ಚರ್ಚೆ ನಡೆಸಿದ್ದೇವೆ. ಪ್ರಥಮ ಇನಿಂಗ್ಸ್ನಲ್ಲಿ ಕೇವಲ ಒಂದು ರನ್ಗೆ ವಿಕೆಟ್ ಒಪ್ಪಿಸಿದ ಬಳಿಕ ನೆಟ್ಸ್ನಲ್ಲಿ ಬ್ಯಾಟಿಂಗ್ ಡ್ರಿಲ್ಸ್ ಮಾಡಿದ್ದೇನೆ. ಇದು ಮುಂದಿನ ದಿನಗಳಲ್ಲಿ ಸಕಾರವಾಗಲಿದೆ ಎಂದು ಭಾವಿಸಿದ್ದೇನೆ ಎಂದು ಸುದ್ದಿಗಾರರೊಂದಿಗೆ ಹೇಳಿದರು.

ನನ್ನ ಬ್ಯಾಟಿಂಗ್ ಸ್ವಲ್ಪ ಅಂತಿಮ ಹಂತದಲ್ಲಿದ್ದೇನೆ. ಒಂದೇ ಒಂದು ಅಂಶದ ಮೇಲೆ ನಾನು ಗಮನ ಹರಿಸಬೇಕಿದೆ. ಇದು ಏನು? ಮತ್ತು ಇದರ ಬಗ್ಗೆ ಹೆಚ್ಚು ಚರ್ಚೆ ನಡೆಸಲು ಬಯಸುವುದಿಲ್ಲ. ಹೌದು ಇದರ ಮೇಲೆ ಸಾಕಷ್ಟು ಕೆಲಸ ಮಾಡಿ ಮುಂದೆ ಸಾಗಿದ್ದೇನೆ. ಬ್ಯಾಟಿಂಗ್ ವೇಳೆ ಇದು ಸಾಧ್ಯವಾಗಿದ್ದು ಹೆಚ್ಚು ಖುಷಿ ತಂದಿದೆ ಎಂದರು.

ಈ ಹಿಂದೆ ಏನಾಗಿದೆ ಎಂಬುದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಅದನ್ನು ನಾನು ಮರು ಪ್ರಸ್ತಾಪಿಸುವುದಿಲ್ಲ. ಕೊನೆಯ ಅಂಶ ಹೇಳ ಬಯಸಬೇಕಾದರೆ ಹೌದು ಕೊನೆಯ ಇನ್ನಿಂಗ್ಸ್‌ನಲ್ಲಿ ೮೧ ರನ್ ಗಳಿಸಿದ್ದೇನೆ ಎಂದು ಹೇಳುತ್ತೇನೆ. ಇದೇ ಲಯವನ್ನು ಟೆಸ್ಟ್ ಪಂದ್ಯದಲ್ಲೂ ಮುಂದುವರಿಸುತ್ತೇನೆ. ಈ ಇನಿಂಗ್ಸ್‌ನಲ್ಲಿ ಹಲವು ಬಾರಿ ಆನ್ ಡ್ರೈವ್‌ಗಳನ್ನು ಮಾಡಿದ್ದೇನೆ. . ಇದು ಹೆಚ್ಚಿನ ವಿಶ್ವಾಸವನ್ನು ನೀಡಿದೆ ಎಂದು ಮಯಾಂಕ್ ನುಡಿದಿದ್ದಾರೆ.

Leave a Comment