ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆಗೆ ರಾಯ್‌ಗೆ ಇದು ಸೂಕ್ತ ಕಾಲ: ಇಂಗ್ಲೆಂಡ್‌ ಕೋಚ್‌

ಲಂಡನ್‌, ಜು 18 -ಇಂಗ್ಲೆಂಡ್‌ ಚೊಚ್ಚಲ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ ಅವರು ಟೆಸ್ಟ್‌ ವೃತ್ತಿ ಜೀವನವನ್ನೂ ಯಶಸ್ವಿಯಾಗಿ ಶುಭಾರಂಭ ಮಾಡಲಿದ್ದಾರೆ ಎಂದು ಬ್ರಿಟಿಷ್‌ ಕ್ರಿಕೆಟ್‌ ತಂಡದ ಕೋಚ್‌ ಎಡ್ ಸ್ಮಿತ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೇಸನ್‌ ರಾಯ್‌ ಅವರು ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ್ದರು. ಏಳು ಇನಿಂಗ್ಸ್‌ಗಳಲ್ಲಿ ಒಟ್ಟು 443 ರನ್‌ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮಹತ್ವದ ಆ್ಯಶಸ್‌ ಸರಣಿಗೂ ಮುನ್ನ ಐರ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ತಮ್ಮ ದೀರ್ಘ ಕಾಲದ ಕನಸು ಈಡೇರಿಸಿಕೊಳ್ಳುತ್ತಿರುವ ಜೇಸನ್‌ ರಾಯ್‌, ಅವರು ಹಿಂದಿಗಿಂತಲೂ ಪರಿಪೂರ್ಣ ಆಟಗಾರರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನದಲ್ಲಿನ ಪ್ರಬುದ್ಧತೆಯನ್ನು ಕಂಡಿದ್ದೇವೆ. ಅವರ ಪ್ರತಿಭೆ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಇಂಗ್ಲೆಂಡ್‌ ಮುಖ್ಯ ತರಬೇತುದಾರ ಹೇಳಿದ್ದಾರೆ.

ಆಯ್ಕೆದಾರರು ಬಹಳ ಹಿಂದಿನಿಂದಲೂ ಜೇಸನ್‌ ರಾಯ್‌ನ ಅಭಿಮಾನಿಗಳಾಗಿದ್ದಾರೆ ಎಂಬುದು ದೊಡ್ಡ ರಹಸ್ಯವಲ್ಲ. ಜೇಸನ್ ರಾಯ್ ಅವರೊಂದಿಗಿನ ದೊಡ್ಡ ಪ್ರಶ್ನೆಯೆಂದರೆ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲ ಸೂಕ್ತ ಸಮಯ ಯಾವಾಗ ? ಈ ಬಗ್ಗೆ ನಾಯಕ ಜೋ ರೂಟ್‌ ಬಳಿ ತಿಂಗಳುಗಳ ಹಿಂದೆ ಚರ್ಚೆ ನಡೆಸಲಾಗಿತ್ತು ಎಂದು ಹೇಳಿದರು.

Leave a Comment