ಟೆರರಿಸ್ಟ್ ರಾಗಿಣಿ

ಪ್ರಕಾಶ್

ದಿ ಟೆರರಿಸ್ಟ್ ಹೆಸರೇ ಹೇಳುವಂತೆ ಇದು ಭಯತ್ಪಾದಕ ಕತೆ ಒಳಗೊಂಡ ಸಿನೆಮಾ,ಕಷ್ಟಕರ ಸೂಕ್ಷ್ಮ ನೈಜ ಘಟನೆಯನ್ನು ಆಧರಸಿ ದಿ ಟೆರರಿಸ್ಟ್ ಚಿತ್ರವನ್ನು ರೂಪಿಸಿದ್ದೇನೆ ಎನ್ನುತ್ತಾರೆ ನಿರ್ದೇಶಕ ಪಿ.ಸಿ.ಶೇಖರ್.

ಕಳೆದ ಸೋಮವಾರ ನಡೆದ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ವಿವರ ನೀಡಿದ ಅವರು ಸಿನೆಮಾಕ್ಕೆ ಪ್ರತಿ ದಿನ ನಡೆಯುವ ಅಂಶಗಳನ್ನು ತೆಗೆದುಕೊಳ್ಳಲಾಗಿದೆ.ಎಲ್ಲಾ ವಿಭಾಗಗಳನ್ನು ವಿಶ್ಲೇಷಿಸಿ ವಿಲನ್ ಆಧಾರಿತ ಕತೆಗೆ ಮಹಿಳೆಯ ನೋವು, ಭಾವನೆಗಳನ್ನು ಪೋಣಿಸಲಾಗಿದೆ ಎನ್ನುತ್ತಾರೆ. ಈಗಾಗಲೇ ಟೆರರಿಸ್ಟ್ ಸಿನೆಮಾದ ಚಿತ್ರೀಕರಣವನ್ನು ಮುಗಿಸಲಾಗಿದ್ದು ಬಿಡುಗಡೆಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ, ಸದ್ಯದಲ್ಲಿಯೇ  ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ನಡೆಯಲಿದೆ  ಎಂದು ಮಾತಿಗೆ ವಿರಾಮ ಹಾಕಿದರು.

raginiclrಪೋಸ್ಟರ್ ಬಿಡುಗಡೆ ಮಾಡಲು ಆಗಮಿಸಿದ್ದ ಅಂಬರೀಷ್ ಹೆಸರು ಕೇಳಿದಾಗ ಟೂರಿಸ್ಟ್ ಎಂದು ಕೊಂಡಿದ್ದೆ. ಟೆರರಿಸ್ಟ್ ಅಂತ ಗೊತ್ತಾಗಿದ್ದರೆ ಬರುತ್ತಿರಲಿಲ್ಲ ಎಂದು  ಹಾಸ್ಯ ಚಟಾಕಿ ಹಾರಿಸಿದರು. ಇತ್ತೀಚಿನ ದಿನಗಳಲ್ಲಿ ಯುವ ನಿರ್ದೇಶಕರು ಹೊಸ ಕತೆಗಳನ್ನು ತರುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಒಳ್ಳೆಯ ಚಿತ್ರಗಳು ಬರುತ್ತಿರುವುದು ಸಂತಸ ತಂದಿದೆ. ಖಳನಾಯಕ,ಪೋಷಕನಟ, ನಾಯಕ, ಜನನಾಯಕನಾಗಿ ಇಲ್ಲಿಯವರೆಗೂ ಬಂದಿದ್ದೇನೆ  ಚಿತ್ರರಂಗ ಬೆಳಿಬೇಕು. ಅದರಲ್ಲೂ ನಿರ್ಮಾಪಕರಿಗೆ ಒಳ್ಳೆದು ಆಗಲಿ, ನಿರ್ದೇಶಕರಿಗೆ ಹೆಸರು ಬರಲಿ ಎಂದು ಶುಭಕೋರಿದರು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದು ಖುಷಿ ನೀಡಿತು. ಕೆ.ಆರ್.ಮಾರ್ಕೆಟ್, ಮೆಟ್ರೋ ನಿಲ್ದಾಣ, ಹೊಸ ಜಾಗಗಳಲ್ಲಿ ನಾಲ್ಕು ಕ್ಯಾಮಾರಗಳನ್ನು ಬಳಸಿ ಜನರಿಗೆ ಗೊತ್ತಿಲ್ಲದಂತೆ ಚಿತ್ರೀಕರಣ ಮಾಡಲಾಗಿದೆ.  ಸಾಮಾನ್ಯ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ.

ಅಂಬರೀಶ್ ಅವರು ಬಂದು ಶುಭ ಹಾರೈಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು ರೇಷ್ಮೆ ಸೀರೆಯುಟ್ಟು ಕಂಗೊಳಿಸುತ್ತಿದ್ದ ನಾಯಕಿ ರಾಗಿಣಿ ದ್ವಿವೇದಿ. ಸಮಾಜಕ್ಕೆ ಶಕ್ತಿಶಾಲಿಯಾದ ಸಂದೇಶ ಕೊಡಲಿರುವುದರಿಂದ ನಿರ್ಮಾಣ ಮಾಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳನ್ನು ತೆಗೆದುಕೊಂಡು ಹೋಗುವ ಇರಾದೆ ಇದೆ ಎನ್ನುತ್ತಾರೆ  ಅಲಂಕಾರಸಂತಾನ.  ಸಂಗೀತ ಪ್ರದೀಪ್‌ವರ್ಮ,  ಛಾಯಗ್ರಹಣ ಮುರಳಿಕ್ರಿಷ್, ಸಂಕಲನ ಡಿ.ಸರವಣನ್, ಸಂಭಾಷಣೆ ಸಚ್ಚಿನ್.ಬಿ.ಹೊಳಗುಂದಿ ತಂಡದಲ್ಲಿದ್ದಾರೆ.

Leave a Comment