ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ 2018-2019ಕ್ಕೆ ಚಾಲನೆ

ಮೈಸೂರು. ಜ.13- ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ವೇದಿಕೆ ವಾಲ್ಮೀಕಿ, ಕನಕ, ಕುವೆಂಪು ಜಯಂತಿ ಹಾಗೂ ರಾಜಶೇಖರ ಕೋಟಿ ಸ್ಮರಣಾರ್ಥ ಮಾನಸ ಗಂಗೋತ್ರಿಯ ವಿಲೇಜ್ ವಿಲೇಜ್ ಹಾಸ್ಟೆಲ್ ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ 2018-2019ಕ್ಕೆ ಚಾಲನೆ ನೀಡಲಾಯಿತು.
ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವ್ಯಕ್ತಿಯೋರ್ವರ ಹೆಸರಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಿರುವುದು ಖುಷಿ ನೀಡಿದೆ. ಕೋಟಿ ಅವರು ಪತ್ರಿಕೋದ್ಯಮದಲ್ಲಿದ್ದರೂ ಕಷ್ಟವೆಂದು ಬಂದವರಿಗೆ ಸಹಾಯಹಸ್ತ ನೀಡಿದ್ದರು. ಅವರ ಹೆಸರಿನಲ್ಲಿ ಕ್ರೀಡೆ ಆಯೋಜಿಸಿರುವುದು ಶ್ಲಾಘನೀಯ. ಇದು ಕೇವಲ ಒಂದು ವರ್ಷಕ್ಕೇ ಸೀಮಿತವಾಗಬಾರದು. ಸದಾ ನಡೆಯುತ್ತಲೇ ಇರಬೇಕು ಎಂದರಲ್ಲದೇ, ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಈ ಸಂದರ್ಭ ಪಿ.ಹೆಚ್.ಡಿ ಪ್ರವೇಶಾತಿ ಘಟಕದ ಸಂಯೋಜನಾಧಿಕಾರಿ ಡಾ.ಜ್ಯೋತಿ, ಗಾಂಧಿಭವನದ ನಿರ್ದೇಶಕ ಪ್ರೊ.ಶಿವರಾಜಪ್ಪ, ಸಿಂಡಿಕೇಟ್ ಸದಸ್ಯ ಎಂ.ಎಸ್.ಎಸ್.ಕುಮಾರ್ ಕಾಂಗ್ರೆಸ್ ಮುಖಂಡ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು. ಜನವರಿ 15ರವರೆಗೆ ಪಂದ್ಯಾವಳಿ ನಡೆಯಲಿದೆ.

Leave a Comment