ಟೆನ್ನಿಸ್‌ನಲ್ಲಿ ಅಂಕಿತಗೆ ಕಂಚು

ಪಾಲೆಂಬಗ್, ಆ ೨೩- ಇಂಡೋನೇಷ್ಯಾದ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಸ್ಪರ್ಧಿಗಳ ಪ್ರಭಾವಿ ಪ್ರದರ್ಶನ ಮುಂದುವರಿದಿದೆ. ಇಂದು ನಡೆದ ಟೆನ್ನಿಸ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅಂಕಿತ ರೈನಾ ಕಂಚು ಪದಕ ಪಡೆದಿದ್ದಾರೆ.

ಟೆನ್ನಿಸ್ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಅಂಕಿತ ರೈನಾ ಕಂಚಿನ ಪದಕಕ್ಕೆ ಕೊರಳ್ಳೊಡ್ಡಿದ್ದಾರೆ. ಚೀನಾದ ಶುಯಿ ಜಾಂಗ್ ವಿರುದ್ಧ ೪-೬, ೬-೭ ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ೨೦೦೬ರ ಏಷ್ಯನ್ ಗೇಮ್ಸ್‌ನಲ್ಲಿ ಸಾನಿಯಾ ಮಿಶ್ರಾ ಅವರ ನಂತರ ೨೫ ವರ್ಷದ ಅಂಕಿತ ರೈನಾ ಅವರು ಕಂಚು ಪಡೆದ ಎರಡನೇ ಭಾರತೀಯ ಟೆನ್ನಿಸ್ ಆಟಗಾರ್ತಿಯಾಗಿದ್ದಾರೆ.

ನಿನ್ನೆನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಹಾಂಕಾಂಗ್‌ನ ಯೂಡಿಸ್ ಚೊಂಗ್ ವಿರುದ್ಧ ೬-೪,೬-೧ ರ ಅಂತರದ ಗೆಲುವು ದಾಖಲಿಸಿದರು. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೧೬ಕ್ಕೆ ಏರಿಕೆಯಾಗಿದೆ. ಇದರಲ್ಲಿ ನಾಲ್ಕು ಚಿನ್ನ, ಮೂರು ಬೆಳ್ಳಿ ಹಾಗೂ ಒಂಬತ್ತು ಕಂಚಿನ ಪದಕಗಳು ಸೇರಿವೆ. ಈ ಮೂಲಕ ಭಾರತದ ಪದಕಗಳ ಪಟ್ಟಿಯಲ್ಲಿ ೯ನೇ ಸ್ಥಾನದಲ್ಲಿದೆ.

ಏಷ್ಯನ್ ಗೇಮ್ಸ್‌ನ ಪದಕ ಪಟ್ಟಿ
ಚೀನಾ ೫೧ ೩೪ ೧೬ ೧೦೧
ಜಪಾನ್ ೨೦ ೨೫ ೨೮ ೭೩
ಕೊರಿಯಾ ೧೧ ೧೯ ೨೭ ೫೭
ಇರಾನ್ ೯ ೭ ೭ ೨೩
ಇಂಡೋನೇಷಿಯಾ ೭ ೫ ೯ ೨೧
ಥಾಲೈಂಡ್ ೫ ೩ ೧೪ ೨೨
ಉತ್ತರ ಕೊರಿಯಾ ೫ ೨ ೩ ೧೦
ಉಜ್ಬೆಕಿಸ್ತಾನ್ ೪ ೬ ೭ ೧೭
ಭಾರತ ೪ ೩ ೯ ೧೬

Leave a Comment