ಟೀಮ್ ಇಂಡಿಯಾ ಕೋಚ್‌ಗೆ ಆರು ಮಂದಿ ಮಧ್ಯೆ ಪೈಪೋಟಿ

ನವದೆಹಲಿ, ಆ. ೧೩- ಭಾರತೀಯ ಕ್ರಿಕೆಟ್ ತಂಡದ ಪ್ರತಿಷ್ಠಿತ ಪ್ರಧಾನ ಕೋಚ್ ಹುದ್ದೆಗಾಗಿ ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಆರು ಮಂದಿಯ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
ನ್ಯೂಜಿಲೆಂಡ್‌ನ ಮಾಜಿ ಕೋಚ್ ಮೈಕ್ ಹೆಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಹಾಗೂ ಶ್ರೀಲಂಕಾ ಕೋಚ್ ಟಾಮ್ ಮೂಡಿ, ವೆಸ್ಟ್‌ಇಂಡೀಸ್ ಮಾಜಿ ಆಲ್‌ರೌಂಡರ್ ಹಾಗೂ ಆಫ್ಘಾನಿಸ್ತಾನ ತಂಡದ ಕೋಚ್ ಫಿಲ್ ಸಿಮನ್ಸ್ ಬಿಸಿಸಿಐ ಮಾಜಿ ವ್ಯವಸ್ಥಾಪಕ ಲಾಲ್ಚಂದ್ ರಜಪೂತ್, ಮಾಜಿ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ಮತ್ತು ರವಿಶಾಸ್ತ್ರಿ ಮುಖ್ಯ ತರಬೇತುದಾರರ ಹುದ್ದೆಯ ರೇಸ್‌ನಲ್ಲಿದ್ದಾರೆ.
ಅಂತಿಮಗೊಳಿಸಲಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಭಾgತೀಯ ಕ್ರಿಕಟ್ ತಂಡದ ಕ್ರಿಕಟ್ ಸಲಹಾ ಸಮಿತಿಯ ಮುಖ್ಯಸ್ಥ ಕಪಿಲ್ ದೇವ್ ಅವರಿಗೆ ಸಲ್ಲಿಸಲಾಗುತ್ತದೆ. ಇನ್ನೊಂದು ವಾರದೊಳಗಾಗಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಹೊಸದಾಗಿ ನೇಮಿಸಲಾಗಿರುವ ಅನ್ಶುಮನ್ ಗಾಯಕವಾಡ್ ಹಾಗೂ ಭಾರತ ಮಹಿಳಾ ಕ್ರಿಕಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಕೋಚ್ ಆಯ್ಕೆ ದಾರರ ಪಟ್ಟಿಯಲ್ಲಿ ಇದ್ದಾರೆ.
ಈ ಆರು ಮಂದಿ ಕೋಚ್ ಆಕಾಂಕ್ಷಿಗಳು ಸಿಎಸಿ ಮುಂದೆ ಸಂದರ್ಶನಕ್ಕೆ ಹಾಜರಾಗಿ ಕೋಚ್ ಹುದ್ದೆ ನಿಭಾಯಿಸುವ ಕುರಿತು ಸಂದರ್ಶನದಲ್ಲಿ ವಿವರಣೆ ನೀಡಬೇಕೆಂದು ಬಿಸಿಸಿಐ ತಿಳಿಸಿದೆ.
ತಂಡದ ಪ್ರಧಾನ ಕೋಚ್ ಹುದ್ದೆಗೆ ರವಿಶಾಸ್ತ್ರಿಯವರ ಬಗ್ಗೆ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಮುನ್ನ ಒಲವು ವ್ಯಕ್ತಪಡಿಸಿದ್ದರು. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಆದರೂ ಕೊಹ್ಲಿ, ರವಿಶಾಸ್ತ್ರಿ ಹೆಸರನ್ನು ಪ್ರಸ್ತಾಪಿಸಿದ್ದರು.
ಪ್ರಸ್ತುತ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು ಅಲ್ಲಿಯವರಗೂ ರವಿಶಾಸ್ತ್ರಿ ಪ್ರಧಾನ ಕೋಚ್, ಭರತ್ ಅರುಣ್ ಬೌಲಿಂಗ್ ಕೋಚ್, ಸಂಜಯ್ ಬಂಗಾರ್ ಬೌಲಿಂಗ್ ಕೋಚ್ ಮತ್ತು ಆರ್ ,ಶ್ರೀಧರ್ ಬೌಲಿಂಗ್ ಕೋಚ್‌ಗಳಾಗಿ ಮುಂದುವರೆಯಲಿದ್ದಾರೆ.
ಇನ್ನು ಕೆಲವು ದಿನಗಳಲ್ಲಿ ಭಾರತೀಯ ಕ್ರಿಕಟ್ ತಂಡದ ಪ್ರಧಾನ ಕೋಚ್ ಸೇರಿದಂತೆ ವಿವಿಧ ವಿಭಾಗಗಳ ಕೋಚ್ ಹುದ್ದೆಯ ಪಟ್ಟ ಯಾರಿಗೆ ದೊರೆಯಲಿದೆ ಎಂಬುದು ಬಹಿರಂಗವಾಗಲಿದೆ.

Leave a Comment