ಟೀಕೆಗಳಿಗೆ ತಲೆಗೆಡಿಸಲ್ಲ: ರೈ

ಬಂಟ್ವಾಳ, ಮಾ.೧೩- ಟೀಕಾಕಾರರ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅಭಿವೃದ್ಧಿ ಕಾರ್ಯಗಳೇ ನನ್ನ ದಿಟ್ಟ ಉತ್ತರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಿ.ಸಿ.ರೋಡಿನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಶಿಲಾನ್ಯಾಸ ನೆರವೇರಿಸಿ ಬಳಿಕ ಬಂಟ್ವಾಳ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಕ್ಷೇತ್ರದ ಅಭಿವೃದ್ದಿ ಕಾರ್ಯದಲ್ಲಿ ಯಾವುದೇ ಉದಾಸೀನ ತೋರಿಲ್ಲ ಎಂದರು. ಬಂಟ್ವಾಳಕ್ಕೆ ೫೬ ಕೋ.ರೂ.ವೆಚ್ಚದಲ್ಲಿ ಒಳಚರಂಡಿ ಯೋಜನೆಗೂ ಮಂಜೂರಾತಿ ದೊರಕಿದ್ದು, ಇದಕ್ಕಾಗಿ ಕೆಲವೆಡೆ ಭೂಸ್ವಾಧೀನದ ಅವಶ್ಯಕತೆ ಇದೆ, ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಡಿನಲ್ಲಿ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾವಗೊಳಿಸಲಾಗಿದ್ದು, ಪ್ರತಿಯೊಬ್ಬ ಪುರವಾಸಿಗೂ ನೀರು ಪೂರೈಕೆಯ ನಿಟ್ಡಿನಲ್ಲಿ ಪೈಪ್‌ಲೈನ್ ವಿಸ್ತರಣಾಗೆ ಪ್ರತ್ಯೇಕ ಹಣವನ್ನು ಕಾದಿರಿಸುವಂತೆ ಸೂಚಿಸಿದರು. ಬೆಂಜನಪದವಿನಲ್ಲಿ ನಿರ್ಮಾಣವಾಗಲಿರುವ ತಾಲೂಕು ಕ್ರೀಡಾಂಗಣಕ್ಜೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಗುವುದು, ಸೂಕ್ತ ಜಮೀನು ಲಭ್ಯವಾದ ತಕ್ಷಣ ಸಂಚಾರಿ ಠಾಣೆ, ಆರ್‌ಟಿಒ ಕಚೇರಿ, ದೇವರಾಜ ಅರಸು ಭವನದ ನಿರ್ಮಿಸಲಾಗುವುದು ಮುಂದಿನ ದಿನದಲ್ಲಿ ರಾಜ್ಯದ ಎಲ್ಲಿಯಾದರೂ ಸಹಾಯಹ ಕಮೀಷನರ್ ಕಚೇರಿಗೆ ಸರಕಾರ ಮಂಜೂರಾತಿ ನೀಡಿದರೆ ಅದು ಬಂಟ್ವಾಳದಲ್ಲಿ ಸ್ಥಾಪನೆಯಾಗಲಿದೆ ಎಂದರು.
ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವ ರಮಾನಾಥ ರೈ ಅವರ ವಿಶೇಷ ಮುತುವರ್ಜಿಯಿಂದ ಪುರಸಭೆಗೆ ಹದಿಮೂರುವರೆ ಕೋ.ವಿಶೇಷ ಅನುದಾನ ದೊರೆತಿದೆ ಎಂದರು. ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯಸಚೇತಕ ಐವನ್ ಡಿ’ಸೋಜ, ಗೇರುಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಹೆಚ್.ಖಾದರ್, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುತ್ತೂರು ನಗರಾಭಿವೃದ್ಧಿ ಯೋಜನೆಯ ಅಧ್ಯಕ್ಷ ಪ್ರಶಾಂತ್ ಕೌಶಲ್ ಶೆಟ್ಟಿ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಶಾಹುಲ್ ಹಮೀದ್, ಮಂಜುಳಾ ಮಾವೆ, ಬೂಡಾ ಸದಸ್ಯ ಕಾರ್ಯದರ್ಶಿ ಅಭಿಲಾಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಟ್ಟಡ ಕಾಮಗಾರಿಯ ಗುತ್ತಿಗೆದಾರ ಓಝೋಲ್ಡ್ ಗೋವಿಯಸ್‌ರವರನ್ನು ಸನ್ಮಾನಿಸಲಾಯಿತು.
ಬೂಡಾ ಅಧ್ಯಕ್ಷ ಸದಾಶಿವ ಬಂಗೇರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪುರಸಭಾ ಮುಖ್ಯಾಧಿಕಾರಿ ರೇಖಾಶೆಟ್ಟಿ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment