ಟಿ20 ವಿಶ್ವಕಪ್‌ ಮೇಲೆ ಕೊರೊನಾ ಕಾರ್ಮೋಡ

ನವದೆಹಲಿ, ಮೇ 29-   ಕ್ರಿಕೆಟ್‌ ಸಮರ ಎಂದೇ ಬಿಂಬಿತವಾಗಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಡೆಯವ ಬಗ್ಗೆ ಅಭಿಮಾನಿಗಳಲ್ಲಿ ದಿನೇ ದಿನೇ ಕೌತುಕಗಳು ಹೆಚ್ಚುತ್ತಲೆ ಇದೆ. ಆದರೆ ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ಇದೇ ವರ್ಷ ಆಯೋಜಿಸುವ ಅಥವಾ ಮುಂದೂಡುವ ಬಗ್ಗೆ ಜೂನ್ 10ರಂದು ನಿರ್ಧರಿಸಲಾಗುವುದು ಎಂದು ಐಸಿಸಿ ತಿಳಿಸಿದೆ.

ಐಸಿಸಿ ಟೆಲಿ ಕಾನ್ಫರೆನ್ಸ್‌ನಲ್ಲಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆಯೋಜನೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದನ್ನು ಜೂ. 10ರ ತನಕ ಕಾಯ್ದಿರಿಸಲಾಗಿದೆ ಎಂದು ತಿಳಿಸಿದೆ. ಕೊರೊನಾ ವೈರಸ್ ಹಾವಳಿಯಿಂದಾಗಿ ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಇರುವುದರಿಂದ ಅಕ್ಟೋಬರ್‌–ನವೆಂಬರ್‌ನಲ್ಲಿ  ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಆಯೋಜನೆಯು ಅನಿಶ್ಚಿತವಾಗಿದೆ. ಒಂದೊಮ್ಮೆ ವಿಶ್ವಕಪ್ ಟೂರ್ನಿ ಮುಂದೂಡಿದರೆ, ಆ ಅವಧಿಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಸಲು ಉತ್ಸುಕವಾಗಿದೆ.

ಇದರಿಂದ ಈ ಪಂದ್ಯಾವಳಿ 2022ಕ್ಕೆ ಮುಂದೂಡಲ್ಪಡ ಲಿದೆ ಎಂಬ ಅನೇಕರ ಲೆಕ್ಕಾಚಾರಕ್ಕೂ ಬ್ರೇಕ್‌ ಬಿದ್ದಿದೆ. ಅಕಸ್ಮಾತ್‌ ವಿಶ್ವಕಪ್‌ ಮುಂದೂಡಲ್ಪಟ್ಟದ್ದೇ ಆದಲ್ಲಿ ಈ ಅವಕಾಶವನ್ನು ಐಪಿಎಲ್‌ ಆಯೋಜನೆಗೆ ಬಳಸಬಹುದು ಎಂಬ ಬಿಸಿಸಿಐಗೂ ಸದ್ಯ ನಿರಾಸೆಯೇ ಗತಿಯಾಗಿದೆ.

ಇನ್ನು ಇತ್ತೀಚೆಗೆ ಐಸಿಸಿನಲ್ಲಿ  2021 ವಿಶ್ವಕಪ್‌ನ್ನು ಭಾರತದ ಸಾರಥ್ಯ ವಹಿಸಲಿದೆ ಎಂದು ಚರ್ಚೆ ನಡೆಸಲಾಗಿತ್ತು. ಇದೀಗ ಮತ್ತೆ  ಟ್ವೆಂಟಿ–20 ವಿಶ್ವಕಪ್ ಟೂರ್ನಿ ಮೇಲೆ ಕೊರೊನಾ ಕಾರ್ಮೋಡ ಕವಿದಿದೆ.

Share

Leave a Comment