ಟಿ-20, ಕ್ರಿಕೆಟ್ ಧೋನಿ ‘ಗುಡ್ ಬೈ’ ಹೇಳಲು ಲಕ್ಷ್ಮಣ್ ಸಲಹೆ

ನವದೆಹಲಿ, ನ. ೬- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಎಂ.ಎಸ್. ಧೋನಿ ಟಿ-20 ಕ್ರಿಕೆಟಿಗೆ ಗುಡ್ ಬೈ ಹೇಳಬೇಕೆಂಬ ಕೂಗು ಕೇಳಿ ಬಂದಿದೆ.
ಇದಕ್ಕೆ ಮಾಜಿ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿಕೆ ಪುಷ್ಠಿ ನೀಡಿದೆ. ರಾಜ್‌ಕೋಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋಲಿಗೆ ಧೋನಿಯ ನಿರ್ಲಕ್ಷ್ಯ ಆಟವೇ ಕಾರಣವಾಗಿದೆ. ಹೀಗಾಗಿ ಟಿ-20 ಮಾದರಿಯ ಕ್ರಿಕೆಟ್‌ಗೆ ಧೋನಿ ವಿರಾಮ ಹೇಳಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಧೋನಿ ಏಕದಿನ ಕ್ರಿಕೆಟ್‌ನಲ್ಲಿ ಆಡುವುದು ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ.
ಧೋನಿ ನಿವೃತ್ತಿಯಾಗಲು ಕಾಲ ಪಕ್ವವಾಗಿದೆ. ಯುವಕರಿಗೆ ಅವಕಾಶ ನೀಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುತ್ತದೆ. ಒಂದು ದಿನದ ಕ್ರಿಕೆಟ್‌ನಲ್ಲಿ ಧೋನಿ ಅವಿಭಾಜ್ಯ ಅಂಗವಾಗಿದ್ದಾರೆಂದು ಅಭಿಪ್ರಾಯಪಟ್ಟರು.
ಲಕ್ಷ್ಮಣ್ ಹೇಳಿಕೆಗೆ ಬೆಂಬಲ ಸೂಚಿಸಿರುವ ಮತ್ತೊಬ್ಬ ಮಾಜಿ ಆಟಗಾರ ಅಜಿತ್ ಅಗರ್ಕರ್. ಟಿ.20 ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಕುರಿತು ಧೋನಿ ಚಿಂತಿಸುವ ಅಗತ್ಯವೆಂದು ಹೇಳಿದ್ದಾರೆ.
ರಾಜಕೋಟ್‌ನಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತ 40 ರನ್‌ಗಳಿಂದ ಸೋಲುಅನುಭವಿಸಿತ್ತು. ತಂಡ ಸೋಲುವ ಭೀತಿಯಿಲ್ಲಿದ್ದಾಗ ಆಡಲು ಬಂದ ಧೋನಿ ಬಿರುಸಿನ ಆಟವಾಡುವಲ್ಲಿ ವಿಫಲರಾಗಿದ್ದರು.

Leave a Comment