ಟಿ.ವೈ. ದಾದಯ್ಯ ನಿಧನ

ತುಮಕೂರು, ಮಾ. ೧೩- ಮಾಜಿ ನಗರಸಭಾ ಅಧ್ಯಕ್ಷರಾದ ಟಿ.ವೈ.ದಾದಯ್ಯ ನವರು ಸಿರಾಗೇಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, 5 ಜನ ಮಕ್ಕಳನ್ನು ಅಗಲಿದ್ದಾರೆ. ದಾದಯ್ಯನವರು ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ, ಕಾಳಿದಾಸ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ, ಊರುಕೆರೆಯ ಟಿಎಪಿಸಿಎಂಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆಯು ಊರುಕೆರೆ ತೋಟದಲ್ಲಿ ಇಂದು ಮಧ್ಯಾಹ್ನ ನೆರವೇರಿತು.

Leave a Comment