ಟಿ.ಆರ್. ಸ್ವಾಮಿ ಹುದ್ದೆ ವಾಪಸ್

ಧಾರವಾಡ  ಆ 25 – ಕೋಟ್ಯಾಂತರ ರೂಪಾಯಿ ಅಕ್ರಮ ಸಂಪಾದನೆ ಮಾಡಿದ್ದ,  ಭ್ರಷ್ಟ  ಅಧಿಕಾರಿ  ಟಿ.ಆರ್ ಸ್ವಾಮಿಯನ್ನು   ಕೆಐಎಡಿಬಿ ಯಲ್ಲಿ ಉನ್ನತ ಹುದ್ದೆಗೆ ಶಿಫಾರಸ್ಸುಗೊಳಿಸಿದ್ದ   ಸಿ.ಎಂ ಯಡಿಯೂರಪ್ಪನವರ  ನಡೆಯನ್ನು    ಕಾಂಗ್ರೆಸ್ ಪಕ್ಷದ ವತಿಯಿಂದ ಖಂಡಿಸಿದ್ದರ ಫಲವಾಗಿ    ಸಿ.ಎಂ. ಯಡಿಯೂರಪ್ಪನವರು  ಸದ್ಯದ ಆದೇಶವನ್ನು ಹಿಂಪಡೆದಿದ್ದಾರೆ.
ಭ್ರಷ್ಟಾಚಾರದ  ವಿರುದ್ಧ   ಕಾಂಗ್ರೆಸ್  ಪಕ್ಷ    ಹೋರಾಡಿಕೊಂಡು   ಬಂದಿದೆ.  ಈ ಒಂದು ಆದೇಶ ಹಿಂಪಡೆತಕ್ಕೆ  ಕಾಂಗ್ರೆಸ್ ಪಕ್ಷಕ್ಕೆ   ಆತ್ಮಬಲ   ಹೆಚ್ಚಿದ್ದು    ಹೋರಾಟಕ್ಕೆ     ಹುರುಪು ತುಂಬಿದೆ.
ನಿನ್ನೆಯ ದಿನ   ಕಾಂಗ್ರೆಸ್ ಮುಖಂಡ    ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ  ಮಲಕಾರಿ ಹಾಗೂ ಕಾಂಗ್ರೆಸ್ ಮುಖಂಡರು  ಮಾಧ್ಯಮದ ಮುಖಾಂತರ   ಸರ್ಕಾರದ ಈ ಆದೇಶದ ವಿರುದ್ದ   ತೀಕ್ಷ್ಣವಾಗಿ    ತಿರುಗೇಟು ನೀಡಿದ್ದರು,   ಆದೇಶ ಕೈಬಿಡದಿದ್ದರೆ  ಯಡಿಯೂರಪ್ಪ  ಸರ್ಕಾರದ  ವಿರುದ್ದ ಹೋರಾಟ  ಎಚ್ಚರಿಕೆ ನೀಡಿದ್ದರು. ತ್ವರಿತವಾಗಿ  ಎಚ್ಚೆತಗೊಂಡ ಸರ್ಕಾರ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ.

Leave a Comment