ಟಿಪ್ಪು ಸುಲ್ತಾನ್ ಹಾಸ್ಟಲ್ ಬಗ್ಗೆ ತನಿಖೆಗೆ ಒತ್ತಾಯ

ಬಳ್ಳಾರಿ, ಮೇ.19:ಟಿಪ್ಪು ಸುಲ್ತಾನ್ ವಸತಿ ನಿಲಯ ಹಾಗೂ ಶಾದಿ ಮಹಲ್ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಆಲ್ ಇಂಡಿಯಾ ಮಜ್ಲಿಸ್-ಎ-ಯಿತ್ತೇಹಾದುಲ್ ಮುಸ್ಲಿಮೀನ್ (ಎ.ಐ.ಎಂ.ಐ.ಎಂ) ಪಕ್ಷದ ಜಿಲ್ಲಾಧ್ಯಕ್ಷ ಜಾಕೀರ್ ಒತ್ತಾಯಿಸಿದ್ದಾರೆ.

ನಗರದ ಕೋಟೆ ಪ್ರದೇಶದಲ್ಲಿರುವ ಟಿಪ್ಪು ಸುಲ್ತಾನ್ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಸ್ಥಳೀಯ ವಡ್ಡರ ಬಂಡೆ ಪ್ರದೇಶದಲ್ಲಿರುವ ಶಾದಿ ಮಹಲ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ಮಂಜೂರಾದ ಹಣದ ಅವ್ಯವಹಾರ ಜರುಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಸಮಗ್ರ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಆಯುಕ್ತ ಸಮಕ್ಷಮದಲ್ಲಿ ಜರುಗಿದ ಮುಸ್ಲಿಂರ ಸಭೆಯಲ್ಲಿ ಮಾತನಾಡಿದ ಜಾಕೀರ್ ರವರು, ಶಾದಿಮಹಲ್ ಹಾಗೂ ಟಿಪ್ಪು ಸುಲ್ತಾನ್ ವಸತಿ ನಿಲಯದ ಬಗ್ಗೆ ಮುಸ್ಲಿಂ ಸಮುದಾಯದವರಲ್ಲಿ ಹಲವಾರು ಗೊಂದಲಗಳಿದ್ದು, ಈ ಕುರಿತಂತೆ ಸಮಗ್ರ ತನಿಖೆ ನಡೆಸಿ, ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಡಾ|| ರಾಂಪ್ರಸಾತ್ ಮನೋಹರ್ ರವರ ಸಮಕ್ಷಮದಲ್ಲಿ ಜರುಗಿದ ಈ ಸಭೆಯಲ್ಲಿ ಎ.ಐ.ಎಂ.ಐ.ಎಂ ಪಕ್ಷದ ಮುಖಂಡರಾದ ಜಿಲಾನ್ ಬಾಷ, ಅಕ್ಬರ್, ರಷೀದ್, ಅಲಿ, ಜಿಗರ್, ಜಾವಿದ್, ದಾದಾ ಸಲ್ಮಾನ್, ಚಂದ್ರಕಾಂತ್, ರಮೇಶ್ ಯಾದವ್, ವಾಯಿದ್, ನಾಗರಾಜ್, ರಾಜಣ್ಣ, ಮಾಲಿಕ್, ಸರ್ಮಾಸ್, ಹಾಗೂ ಮುಸ್ಲಿಂ ಸಮುದಾಯದ ಹಿರಿಯ ಧುರೀಣರು, ಮುಖಂಡರುಗಳು ಭಾಗವಹಿಸಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಾಕೀರ್ ರವರು ತಿಳಿಸಿದ್ದಾರೆ.

Leave a Comment