ಟಿಪ್ಪು ಸಂತ ಏನ್ರಿ? ಮಾಧುಸ್ವಾಮಿ ಪ್ರಶ್ನೆ

ತುಮಕೂರು, ನ. ೧- ಜಯಂತಿ ಆಚರಣೆ ಮಾಡಲು ಟಿಪ್ಪು ಸುಲ್ತಾನ್ ಸಂತ ಏನ್ರಿ ಎಂದು ಕಾನೂನು ಮತ್ತು ಸಂಸದಿಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಟಿಪ್ಪು ಜಯಂತಿ ಹಾಗೂ ಪಠ್ಯ ಕ್ರಮ ರದ್ದು ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ.

ಟಿಪ್ಪು ಕುರಿತಂತೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ ಅವರು ಟಿಪ್ಪು ಒಬ್ಬ ಆಡಳಿತಗಾರ ಸಂತನಲ್ಲ. ಸರ್ಕಾರ ಜಾತಿ ಕಾರಣಕ್ಕೂ ನಡೆತೆಯ ಕಾರಣಕ್ಕೂ ಸದ್ಗುರು, ಸಾಧು, ಸಂತ, ಶರಣರ, ಜಯಂತಿ ಆಚರಿಸುತ್ತಿದೆ. ಇದರೊಂದಿಗೆ ಮಹದೀಯರಲ್ಲಿ ಜಯಂತಿಗಳ ಆಚರಣೆ ಪದ್ಧತಿಯಿಲ್ಲ ಎಂದು ಹೇಳಿದರು.

ಹಿಂದಿನ ಸರ್ಕಾರ ಟಿಪ್ಪು ಜಯಂತಿ ಆಚರಣೆ ಘೋಷಿಸಿದ ನಂತರ ನಮ್ಮ ಪಕ್ಷ ಅದನ್ನು ವಿರೋಧಿಸುತ್ತಲೇ ಬಂದಿದೆ. ಆ ನಿಲುವಿಗೆ ನಾನು ಬದ್ಧನಾಗಿದ್ದೇನೆ ಎಂದ ಅವರು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇ‌ಪಿ) ಒಪ್ಪಂದ ಜಾರಿಯಿಂದ ರಾಜ್ಯದ ಹೈನೋದ್ಯಮ ಹಾಳಾಗಲು ಬಿಡುವುದಿಲ್ಲ. ರಾಜ್ಯದಲ್ಲಿ ಪ್ರತಿನಿತ್ಯ 70 ರಿಂದ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.

ಗ್ರಾಮೀಣ ಜನರಿಗೆ ಹೈನೋದ್ಯಮ ಆಧಾರವಾಗಿದೆ. ಆರ್‌ಸಿಇಪಿ ಒಪ್ಪಂದಿಂದ ಹೈನೋದ್ಯಮದ ಮೇಲೆ ಪರಿಣಾಣ ಬೀರಲಿದ್ದು, ಈ ಅಂಶ ಕುರಿತಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದರು.

Leave a Comment