ಟಿಪ್ಪು ಭಾವಚಿತ್ರ ಮೆರವಣಿಗೆಗೆ ಅವಕಾಶ ನೀಡಲು ಒತ್ತಾಯ

ಪಿರಿಯಾಪಟ್ಟಣ, ನ.8- ಸರ್ಕಾರ ನಿಗದಿ ಮಾಡಿರುವ ಟಿಪ್ಪು ಜಯಂತಿಯಲ್ಲಿ ಪಟ್ಟಣದಲ್ಲಿ ಟಿಪ್ಪು ಸುಲ್ತಾನರ ಭಾವಚಿತ್ರವನ್ನು ಮೆರವಣಿಗೆ ಮಾಡಲು ಅವಕಾಧ ನೀಡಬೇಕು ಎಂದು ಮುಸ್ಲಿಂ ಬಾಂಧವರು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರು.
ತಾಲೂಕು ಆಡಳಿತವು ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ನ.10 ರಂದು ಆಚರಿಸಲು ನಿರ್ಧರಿಸಿರುವ ಟಿಪ್ಪು ಜಯಂತಿಯನ್ನು ಪೂರ್ವಭಾವಿ ಸಭೆಯಲ್ಲಿ ಮಾಜಿ ತಾ.ಪಂ.ಸದಸ್ಯ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಅತ್ತರ್ ಮತೀನ್ ಮಾತನಾಡಿ ಸರ್ಕಾರವು ನಿಗದಿ ಮಾಡಿರುವ ಕಾರ್ಯಕ್ರಮಕ್ಕೆ ತಾಲೂಕಿನ ಮುಸ್ಲಿಂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಹಜರತ್ ಟಿಪ್ಪು ಸುಲ್ತಾನ್‍ರ ಜೀವನ ಮತ್ತು ಸಾಧನೆ ಕುರಿತ ಸ್ಥಬ್ದಚಿತ್ರಗಳನ್ನು ಮೆರವಣಿಗೆಯಲ್ಲಿಟ್ಟು ಜನತೆಗೆ ಅವರ ಸಾಧನೆಗಳನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಿರಸ್ಥೇದಾರ್ ಪ್ರಕಾಶ್ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲು ಸರ್ಕಾರ ಸೂಚಿಸಿದೆ. ಸರ್ಕಾರದ ನಿಯಮದ ಪ್ರಕಾರ ನ.10 ರಂದು ಒಳಾಂಗಣದಲ್ಲಿ ಆಚರಿಸಬೇಕಾಗಿದ್ದು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಶಾಂತಿಯುತವಾಗಿ ನಡೆಸಬೇಕಾಗಿದ್ದುಇದಕ್ಕೆ ಪೂರಕವಾಗಿ ಪೊಲೀಸ್ ಬಂದೋಬಸ್ತ್ ಸಹ ನೀಡಲಾಗುತ್ತಿತ್ತು, ಇಲ್ಲಿಯ ವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆ ಮಾಡಲು ಅವಕಾಶ ನೀಡಿರಲಿಲ್ಲ ಈ ಬಾರಿ ನೀವು ಇಟ್ಟಿರುವ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಸಿಪಿಐ ಪ್ರದೀಪ್, ಪಿಎಸ್‍ಐ ಗಣೇಶ್, ಜಿ.ಪಂ.ಮಾಜಿ ಸದಸ್ಯ ರಹಮತ್‍ಜಾನ್ ಬಾಬು, ತಾ.ಪಂ.ಸದಸ್ಯ ಎಸ್.ರಾಮು, ಪುರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್‍ಅಜೀಜ್, ಪುರಸಭಾ ಸದಸ್ಯರಾದ ಅಬ್ದುಲ್ ಹರ್ಷದ್, ಮುಖಂಡರಾದ ಷಪೀ ಅಹಮದ್. ಇರ್ಷಾದ್, ಮುನೀರ್ ಮತ್ತು ವಿವಿಧಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Comment