ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಬೇಡ : ಸಂಸದ ಜೋಶಿ

ಹುಬ್ಬಳ್ಳಿ 6, ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಮತ್ತು ತಾಲೂಕ ಮಟ್ಟದಲ್ಲಿ ನಡೆಯುವ ಟಿಪ್ಪುಜಯಂತಿ ಕಾರ್ಯಕ್ರಮದಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ನನ್ನ ಹೆಸರನ್ನು ಮುದ್ರಿಸುವುದು ಬೇಡ ಎಂದು ಸಂಸದ ಶ್ರೀ ಪ್ರಲ್ಹಾದ ಜೋಶಿಯವರು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಟಿಪ್ಪುಜಯಂತಿ ಆಚರಣೆಗೆ ಪ್ರಾರಂಭದಿಂದಲೂ ನಾಡಿನ ಸಾರ್ವಜನಿಕರು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪುಕನ್ನಡ ಮತ್ತು ಹಿಂದೂ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. ಇಂತಹ ವಿವಾದಾತ್ಮಕ ವ್ಯಕ್ತಿಯಜಯಂತಿ ಆಚರಣೆಗೆ ನನ್ನ ವಿರೋಧವಿದೆಎಂದೂ ತಿಳಿಸಿರುವ ಜೋಶಿ ಟಿಪ್ಪು ಕೌರ್ಯದ ಸಂಕೇತ ಕನ್ನಡ ವಿರೋಧಿ ಇಂತವರ ಜಯಂತಿಯ ಆಚರಣೆಗೆ ಸಾರ್ವಜನಿಕ ಬೊಕ್ಕಸದಿಂದ ವೆಚ್ಚಮಾಡುವುದು ಅಕ್ಷಮ್ಯ ಅಪರಾದ ಎಂದೂ ತಿಳಿಸಿದ್ದಾರೆ.

Leave a Comment