ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ: ಆಕ್ರೋಶ

ತುಮಕೂರು, ನ. ೯- ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಜಿ.ಬಿ. ಜ್ಯೋತಿಗಣೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವಿರುದ್ಧ ನಗರದ ಕೆಲ ಮುಸ್ಲಿಂ ಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಹುಲಿ, ಕನ್ನಡದ ಕಲಿ ಹಜರತ್ ಟಿಪ್ಪು ಸುಲ್ತಾನ್ ಒಬ್ಬ ದೇಶ ಪ್ರೇಮಿ. ಅಂಥ ಮಹಾನ್ ನಾಯಕನ ಜಯಂತಿಯನ್ನು ಸರ್ಕಾರವೇ ಆಚರಣೆ ಮಾಡುತ್ತಿರುವಾಗ ಅದನ್ನು ವಿರೋಧಿಸುವುದು ಎಷ್ಟು ಸಮಂಜಸ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಬಿಜೆಪಿ ಶಾಸಕರು ಮುಸ್ಲಿಂ ಮತದಾರರ ಸಹಕಾರ ಇಲ್ಲದೇ ಗೆಲುವು ಸಾಧಿಸಿದ್ದಾರೆಯೇ, ವಿನಾ ಕಾರಣ ವಿರೋಧ ವ್ಯಕ್ತಪಡಿಸುವುದನ್ನು ಬಿಟ್ಟು ಎಲ್ಲ ಮಹಾನ್ ನಾಯಕರ ಜಯಂತಿಯಂತೆ ಟಿಪ್ಪು ಜಯಂತಿಯನ್ನು ಆಚರಣೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ.

ನಗರ ಶಾಸಕರು ಎಲ್ಲ ವರ್ಗದ ನಾಗರಿಕರ ಹಿತ ಕಾಪಾಡುವ ದೃಷ್ಠಿಯಿಂದ ಕಾರ್ಯನಿರ್ವಹಿಸಬೇಕು. ಕೇವಲ ತಮ್ಮ ಪಕ್ಷದ ನಾಯಕ ಆದೇಶ ಪಾಲಿಸಲು ಮುಂದಾದರೆ ನಾಗರಿಕರ ಹಿತ ಮರೆತಂತೆ ಅಲ್ಲವೇ? ಎಂದು ಪ್ರಶ್ನಿಸಿರುವ ಅವರುಗಳು, ಯಾವುದೇ ಕಾರಣಕ್ಕೂ ಶಾಸಕರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮುಸ್ಲಿಂ ಬಾಂಧವರು ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದಿದ್ದಾರೆ.

Leave a Comment