ಟಿಪ್ಪುವರ್ಧನ್

ಅಧೋಗತಿಯತ್ತ ಸಾಗುತ್ತಿರುವ ಸಮಾಜವನ್ನು ಹೇಗೆ ಸುಸ್ಥಿತಿಗೆ ತರಬೇಕೆನ್ನುವ ಅಂಶಗಳನ್ನೊಳಗೊಂಡ ’ಟಿಪ್ಪುವರ್ಧನ್ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಟಿಪ್ಪುವರ್ಧನ್ಚಿತ್ರಕ್ಕೆ ರಚನೆ,ಸಾಹಿತ್ಯ, ನಿರ್ದೇಶನ ಮತ್ತು ಒಂದು ಪಾತ್ರಕ್ಕೆ ಬಣ್ಣ ಹಚ್ಚಿರುವುದು ಅದೇ ಹೆಸರಿನ ಟಿಪ್ಪುವರ್ಧನ್. ಐಎಎಸ್‌ಅಧಿಕಾರಿಯಾಗಿ ಎನ್‌ಜಿಇಎಫ್ ಮಂಜು, ರಾಜಕೀಯ ಧುರೀಣನಾಗಿ ಡಾ.ಚಿಕ್ಕಹೆಜ್ಜಾಜಿಮಹದೇವ್,  ಪೋಲೀಸ್‌ಇನ್ಸ್‌ಪೆಕ್ಟರ್ ಪಾತ್ರದಲ್ಲಿ  ಕೇಶವಅರಸಿಕೆರೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

film-tippuvardhan_134

ಇನ್ಸಾಫ್‌ಖಾನ್, ಜೈಕುಮಾರ್,  ತೇಜಸ್ವಿನಿ, ಮೈಕೆಲ್‌ಮಧು, ರಮ್ಯಾ, ಮಾಸ್ಟರ್ ಮನ್ವಿತ್, ನಾಗರಾಜ್‌ವಟಗಲ್ ಮುಂತಾದವರು ಅಭಿನಯಿಸಿದ್ದಾರೆ.  ರಮೇಶ್‌ಚಂದ್ರ, ನಂದಿತಾ, ಬದ್ರಿಪ್ರಸಾದ್, ಎಂ.ಡಿ.ಪಲ್ಲವಿ, ಬಿ..ಆರ್.ಛಾಯ ಹಾಡಿರುವ ಗೀತೆಗಳಿಗೆ ದಾಮೋದರ್ ಸಂಗೀತವಿದೆ. ವಿಭಿನ್ನಕತೆಗೆ ಅನುಗುಣವಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲು  ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

film-tippuvardhan_116-chandu

ಛಾಯಗ್ರಹಣ ಸುಧಾಕರ್‌ಬಾಬು, ಸಂಕಲನ ಕವಿತಾ,  ಸಹ ಸಂಕಲನ ಸೂರಜ್.ಟಿ, ಹಿನ್ನಲೆ  ಸಂಗೀತ ಸುರೇಶ್‌ಚಂದ್, ಕಲೆ ಅಮರ್. ಪ್ರಚಾರದ ಮೊದಲ  ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ಇದೇ ಸಂದರ್ಭದಲ್ಲಿ ಟ್ರೈಲರ್ ಹಾಗೂ ನಾಲ್ಕು ಹಾಡುಗಳು ಪ್ರದರ್ಶನಗೊಂಡವು. ಆರ್.ಬಿ.ನಡಾಫ್,ಗಜೇಂದ್ರಗಡ  ನಿರ್ಮಾಣ ಮಾಡಿರುವ ಚಿತ್ರವು  ಸದ್ಯದಲ್ಲೆ ತೆರೆಗೆ ಬರುವ ಸಾಧ್ಯತೆ ಇದೆ.

Leave a Comment