ಟಿಟಿಡಿ ಆಸ್ತಿಗಳ ಬಗ್ಗೆ ತೆಲುಗುದೇಶಂ, ಬಿಜೆಪಿಯಿಂದ ರಾಜಕೀಯ; ಡಾ.ಸುಬ್ರಮಣಿಯನ್ ಸ್ವಾಮಿ ಆರೋಪ

ನವದೆಹಲಿ,ಮೇ ೨೬ -ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ಭೂಮಿಗಳ ಮಾರಾಟದ ಬಗ್ಗೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಎನ್. ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (೨೦೧೬) ಟಿಡಿಪಿ, ಬಿಜೆಪಿ ಜೊತೆಗೂಡಿ ಟಿಟಿಡಿ ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ.
ಈ ಉದ್ದೇಶಕ್ಕಾಗಿ ನೇಮಿಸಲಾದ ಸಮಿತಿಯಲ್ಲಿ ಬಿಜೆಪಿ ನಾಯಕ ಭಾನು ಪ್ರಕಾಶ್ ರೆಡ್ಡಿ ಕೂಡಾ ಸದಸ್ಯರಾಗಿದ್ದರು. ಆ ಸಮಯದಲ್ಲಿ ತಮ್ಮ ಪಕ್ಷಕ್ಕೆ ಸೇರಿದ ನಾಯಕ ಮುಜರಾಯಿ ಖಾತೆ ಸಚಿವರೂ ಆಗಿದ್ದರು. ಚಂದ್ರಬಾಬು ನಾಯ್ಡು ಅಧಿಕಾರವಧಿಯಲ್ಲೇ ಆಸ್ತಿಗಳ ಮಾರಾಟದ ಬಗ್ಗೆ ತೀರ್ಮಾನ ಕೈಗೊಂಡಿದ್ದರು ಸ್ವಾಮಿ ತಿಳಿಸಿದ್ದಾರೆ
ನಿರರ್ಥಕ ಆಸ್ತಿಗಳ ಮಾರಾಟದ ಬಗ್ಗೆ ಈ ಹಿಂದಿನ ಸರ್ಕಾರದ ತೀರ್ಮಾನವನ್ನು ರದ್ದುಪಡಿಸಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಕೈಗೊಂಡಿರುವ ತೀರ್ಮಾನಕ್ಕೆ ಸುಬ್ರಮಣಿಯನ್ ಸ್ವಾಮಿ ಧನ್ಯವಾದ ಸಲ್ಲಿಸಿದ್ದಾರೆ.
ಕಳೆದೊಂದು ವಾರದಿಂದ ಟಿಟಿಡಿ ಆಸ್ತಿಗಳ ಬಗ್ಗೆ ಪ್ರತಿಪಕ್ಷ ತೆಲುಗು ದೇಶಂ ಮಾಡುತ್ತಿರುವ ಆರೋಪಗಳ ಹಿನ್ನಲೆಯಲ್ಲಿ, ಡಾ. ಸುಬ್ರಮಣಿಯನ್ ಸ್ವಾಮಿ ಟಿವಿ ವಾಹಿನಿಯೊಂದಕ್ಕೆ ನೀಡುವರ ಸಂದರ್ಶನದಲ್ಲಿ, ತಿರುಮಲ ತಿರುಪತಿ ಆಸ್ತಿಗಳ ಮಾರಾಟದ ಬಗ್ಗೆ ಟಿಡಿಪಿ, ಬಿಜೆಪಿ ನಾಯಕರು ರಾಜಕೀಯಮಾಡುತ್ತಿದ್ದಾರೆ. ದೇವರ ಬಗ್ಗೆ ಸುಳ್ಳು ಹೇಳುವುದು ಸರಿಯಾದುದಲ್ಲ. ರಾಜಕೀಯದಲ್ಲಿ ಪ್ರಾಮಾಣಿಕತೆ ಮುಖ್ಯ. ಸುಳ್ಳು ಹೇಳದವರು ಎಂದಿದ್ದರೂ ಸಿಲುಕಿಬೀಳಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ವೈ ಎಸ್ ಜಗನ್ , ವಿಶ್ವಸಾರ್ಹತೆಯ ರಾಜಕಾರಣಿ, ಹೇಳಿದ್ದನ್ನು ಮಾಡುವ, ನೇರವಾಗಿ ಮಾತನಾಡುವ ವ್ಯಕ್ತಿ. ಆತ ಕ್ರಿಶ್ಚಿಯನ್ ಆದ ಮಾತ್ರಕ್ಕೆ ಅವರ ಸರ್ಕಾರದ ಮೇಲೆ ಕೆಸರು ಎರಚುವುದು ಒಳ್ಳೆಯದಲ್ಲ. ಚಂದ್ರಬಾಬು ತಮ್ಮ ರಾಜಕಾರಣವನ್ನು ಬದಲಾಯಿಸಿಕೊಳ್ಳಬೇಕು. ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು. ತಿರುಮಲ ಆಸ್ತಿಗಳನ್ನು ಮರಾಟಮಾಡಬಾರದು ಎಂದು ಸ್ವಾಮಿ ಹೇಳಿದ್ದಾರೆ.

Share

Leave a Comment