ಟಿಕ್‌ಟಾಕ್‌ಗೆ ಲಗ್ಗೆ ಇಟ್ಟ ರಶ್ಮಿಕಾ

ಬೆಂಗಳೂರು, ಜು ೧೦- ಸದ್ಯ ದಕ್ಷಿಣ ಭಾರತ ಚಿತ್ರಗಳಲ್ಲಿ ಬುಸ್ಯಿಯಾಗಿರುವ ಕನ್ನಡಿತಿ ನಟಿ ರಶ್ಮಿಕಾ ಮಂದಣ್ಣ  ಟಿಕ್ ಟಾಕ್‌ಗೆ ಎಂಟ್ರಿ ಕೊಟ್ಟಿದ್ದಾರೆ

ಇತ್ತೀಚೆಗೆ ಅಷ್ಟೆ ಸೌತ್ ಇಂಡಸ್ಟ್ರಿಯಲ್ಲಿ ಕೋಟಿ ರೂ ಸಂಭಾವನೆ ಪಡೆಯುವ ನಟಿ ಎನಿಸಿಕೊಂಡ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯೆರಾಗಿದ್ದಾರೆ.  ಟಿಕ್ ಟಾಕ್ ಗೆ ಮನ ಸೋತಿರುವ ರಶ್ಮಿಕಾ ಮಂದಣ್ಣ ಹೊಸ ಖಾತೆ ತೆರೆಯುವ ಮೂಲಕ ಗಮನ ಸೆಳೆದಿದ್ದಾರೆ. Iಚಿmಡಿಚಿshmiಞಚಿ ಅವರ ಟಿಕ್ ಟಾಕ್ ಹ್ಯಾಂಡಲ್ ಆಗಿದೆ. ಟಿಕ್ ಟಾಕ್ ಖಾತೆ ಮೂಲಕ ತಮ್ಮ ಮುಂದಿನ ಸಿನಿಮಾ ಡಿಯರ್ ಕಾಮ್ರೆಡ್ ಬಗ್ಗೆ ವಿಷಯಗಳನ್ನು ರಶ್ಮಿಕಾ ಹಂಚಿಕೊಳ್ಳಲು ಮುಂದಾಗಿದ್ದಾರೆ.

ರಶ್ಮಿಕಾ ಕಾಮ್ರೆಡ್ ಸಿನಿಮಾಗಾಗಿ ರಶ್ಮಿಕಾ ೮೦ ಲಕ್ಷ ಸಂಭಾವನೆ ತೆಗೆದುಕೊಂಡಿದ್ದರು. ಆ ಬಳಿಕ ರಶ್ಮಿಕಾ  ಪ್ರಿನ್ಸ್ ಮಹೇಶ್ ಜತೆ ’ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗಾಗಿ ರಶ್ಮಿಕಾ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ತಮಿಳಿನಲ್ಲಿ ವಿಜಯ್‌ಗೆ ನಾಯಕಿಯಾಗಿ ಅಭಿನಯಿಲಿರುವ ರಶ್ಮಿಕಾ ಈ ಸಿನಿಮಾಗಾಗಿ ೧.೫ ಕೋಟಿ ಹಣ ಪಡೆದಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ಇದೀಗ ರಶ್ಮಿಕಾ ಎಂಟ್ರಿಕೊಟ್ಟು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲು ಯತ್ನಿಸಿದ್ದಾರೆ.

ಇಷ್ಟು ದಿನ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದ ಅವರು, ಈಗ ಟಿಕ್ ಟಾಕ್ ಗೆ ಪ್ರವೇಶ ಮಾಡಿ, ತಮ್ಮ ’ಡಿಯರ್ ಕಾಮ್ರೆಡ್’ ಸಿನಿಮಾದ ಎಲ್ಲ ಅಪ್ ಡೇಟ್ ಗಾಗಿ ತಮ್ಮ ಟಿಕ್ ಟಾಕ್ ಖಾತೆಯನ್ನ ಫಾಲೋ ಮಾಡಿ ಎಂದು ಅಭಿಮಾನಿಗಳಿಗೆ ರಶ್ಮಿಕಾ ತಿಳಿಸಿದ್ದಾರೆ. ತಮ್ಮ ಸಿನಿಮಾಗಳ  ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ರಶ್ಮಿಕಾ ಟಿಕ್‌ಟಾಕ್ ಲಗ್ಗೆ ಇಟ್ಟು ಅಭಿಮಾನಿಗಳಿಗೆ ಇದು ನನ್ನ ಟಿಕ್‌ಟಾಕ್ ಹ್ಯಾಂಡಲ್, ಇಲ್ಲಿಯೂ ಪ್ರೋತ್ಸಾಹಿಸಿ ಎಂದು ಇಂಗ್ಲೀಷ್‌ನಲ್ಲಿ ಮನವಿ ಮಾಡಿದ್ದಾರೆ. ಆದರೆ ರಶ್ಮಿಕಾ ಇಂಗ್ಲೀಷ್‌ನಲ್ಲಿ ಮಾತ್ರ ಸಂವಹನ ನಡೆಸಿರುವುದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಮತ್ತೆ ಲಿಪ್‌ಲಾಕ್ ದೃಶ್ಯದಲ್ಲಿ ರಶ್ಮಿಕಾ

ಇಂದು ಡಿಯರ್ ಕಾಮ್ರೆಡ್ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಿದ್ದು, ವಿಜಯ್ ದೇವರಕೊಂಡ ಅವರ ಅವೇಷಭರಿತ ಸಾಹಸ ದೃಶ್ಯ ಜೊತೆಗೆ ಮತ್ತೆ ರಶ್ಮಿಕಾರೊಂದಿಗೆ ಲಿಪ್‌ಲಾಕ್ ಮಾಡಿರುವ ದೃಶ್ಯಗಳು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಭರತ್ ಕಮ್ಮಮ್ ನಿರ್ದೇಶನದ ಹಾಗೂ ಮೈತ್ರಿ ಮೂವಿ ಮೇಕರ್ಸ್ ಅಡಿ ನಿರ್ಮಾಣಗೊಂಡಿರುವ ಈ ಚಿತ್ರದ ಟ್ರೈಲರ್ ಚಾರು ಹಾಸನ್ ಅವರಿಂದ ಆರಂಭಗೊಳ್ಳುತ್ತದೆ. ಟ್ರೈಲರ್ ತುಂಬಾ ವಿಜಯ್ ದೇವರಕೊಂಡ ಗಾಯಗೊಂಡ ಸಿಂಹದಂತೆ ಘರ್ಜಿಸಿದ್ದಾರೆ. ಲಿಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ರೊಮ್ಯಾನ್ಸ್ ಮತ್ತೆ ಮುಂದುವರೆದಿದೆ. ಮೊದಲ ಬಾರಿಗೆ ಕ್ರಿಕೆಟ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಜು ೨೬ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ.

Leave a Comment