ಟಿಂಟೆಡ್ ಗ್ಲಾಸ್ ಉಲ್ಲಂಘಿಸಿದ ಚಾಲಕರ ವಿರುದ್ಧ ಅಭಿಯಾನ

ಬೆಂಗಳೂರು, ಸೆ ೩- ಕಾರಿನ ಕಿಟಕಿಗಳಿಗೆ ಅನಮತಿ ನೀಡಿರುವುದಕ್ಕಿಂತ ಹೆಚ್ಚು ಗಾಢವಾಗಿ ಟಿಂಟೆಡ್ ಗ್ಲಾಸ್ ಹಾಕಿದ್ದರೆ  ಟ್ರಾಫಿಕ್ ಪೊಲೀಸರು ದಂಡ ವಿಧಿಸಲಿದ್ದಾರೆ ಎಂದು ಗೊತ್ತಿದ್ದರೂ ಗಾಢ ಬಣ್ಣದ ಟಿಂಟೆಡ್ ಗ್ಲಾಸ್ ಹಾಕಿಕೊಂಡು ಕಾರು ಚಲಾಯಿಸುವ ಚಾಲಕರಿಗೆ ಹಲಸೂರು ಸಂಚಾರ ಪೋಲಿಸರು ಬಿಸಿಮುಟ್ಟಿಸಿದ್ದಾರೆ.

ನಿಯಮದ ಪ್ರಕಾರ ಮುಂಭಾಗದ ಮತ್ತು ಹಿಂಭಾಗದ ಗಾಜು ಶೇಕಡ ೭೦ರಷ್ಟು ಪಾರದರ್ಶಕವಾಗಿರಬೇಕು. ಸೈಡ್ ಗಾಜು ಶೇಕಡ ೫೦ರಷ್ಟು ಪಾರದರ್ಶಕವಾಗಿರಬೇಕು. ಆದರೆ ನಿಯಮವನ್ನು ಗಾಳಿಗೆ ತೂರಿ ಬೆಂಗಳೂರಿನಲ್ಲಿ ಶೇಕಡ ೮೦-೯೦ರಷ್ಟು ಕಾರುಗಳು ಇಂತಹ ಗಾಢ ಬಣ್ಣದ ಟಿಂಟೆಡ್ ಗ್ಲಾಸ್ ಬಳಸುತ್ತಿದ್ದಾರೆ. ಹಾಗಾಗಿ ಹಲಸೂರು ಸಂಚಾರಿ ಪೋಲಿಸರು ನಗರದಾದ್ಯಂತ ಟಿಂಟೆಡ್ ಗ್ಲಾಸ್‌ವಿರುವ ಕಾರುಗಳನ್ನು ತಡೆದು ಭಾರಿ ದಂಡ ವಿಧಿಸುವ ಮೂಲಕ ಮತ್ತೆ ಅಭಿಯಾನ ಆರಂಭಿಸಿದ್ದಾರೆ.

ಅಪರಾಧಿಗಳು ಟಿಂಟೆಡ್ ಗ್ಲಾಸಿನಲ್ಲಿ ತಪ್ಪಿಸಿಕೊಳ್ಳುವ ಅಪಾಯ ಹೆಚ್ಚು.  ಟಿಂಟೆಡ್ ಗ್ಲಾಸ್ ಕಾರಿನೊಳಗೆ ವೀಕ್ಷಣೆ ಕಷ್ಟ ಸಾಧ್ಯ” ಎಂದು ಟ್ರಾಫಿಕ್ ಪೊಲೀಸರು ಟಿಂಟೆಡ್ ಗ್ಲಾಸ್ ಕಾನೂನು ಉಲ್ಲಂಘನೆ ಮಾಡಿದವರಿಗೆ ಕೇಂದ್ರ ಮೋಟರ್ ವಾಹನ ಕಾಯಿದೆ ೯೨ ಮತ್ತು ೧೦೦ ಪರಿಚ್ಛೇದದ ಸೆಕ್ಷನ್ ೧೭೭ರ ಅನ್ವಯ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಟಿಂಟೆಡ್ ಗ್ಲಾಸ್ ಇದ್ದರೆ ದಂಡ ಕಟ್ಟುವುದು ಅನಿವಾರ್ಯ. ಝಡ್ ಮತ್ತು ಝಡ್ ಪ್ಲಸ್ ಭದ್ರತೆ ಇರುವರಿಗೆ ಮಾತ್ರ ನೂತನ ಟಿಂಟೆಡ್ ಗ್ಲಾಸ್ ಕಾನೂನಿನಲ್ಲಿ ವಿನಾಯಿತಿ ನೀಡಲಾಗಿದೆ. ಅಂದರೆ ಮುಖ್ಯ ಮಂತ್ರಿ ಮತ್ತು ರಾಜ್ಯಪಾಲ ಮುಂತಾದ ಪ್ರಮುಖ ವಿಐಪಿಗಳು ಟಿಂಟೆಡ್ ಗ್ಲಾಸ್ ಬಳಸಬಹುದು.

ವಾಹನಗಳಿಗೆ ಟಿಂಟೆಡ್ ಗ್ಲಾಸ್‌ಗಳನ್ನು ಹಾಗೂ ವಾಹನದ ಗಾಜುಗಳಿಗೆ ಬ್ಲಾಕ್ ಫಿಲಂ (ಸನ್ ಫಿಲಂ) ಅಥವಾ ಇತರೆ ವಸ್ತುಗಳನ್ನು ಅಂಟಿಸದಂತೆ ಹಾಗೂ ಆ ರೀತಿ ಅಂಟಿಸಿದ ಬ್ಲಾಕ್ ಫಿಲಂ (ಸನ್ ಫಿಲಂ) ಗಳನ್ನು ಉಪಯೋಗಿಸಿದ್ದಲ್ಲಿ, ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಅರ್ಹರಾಗುತ್ತಾರೆಂದು ಕಳೆದ ೨೦೧೨ ಮೇ ನಾಲ್ಕರಲ್ಲಿ ನೀಡಿದ ಆದೇಶದಲ್ಲಿ ಕೋರ್ಟ್ ತಿಳಿಸಿದೆ. ಬಳಿಕ ಈ ಬಗ್ಗೆ ವಾಹನ ಸವಾರರಲ್ಲಿ ಅರಿವು ಮೂಡಿಸಲಾಗಿದ್ದರೂ ಚಾಲಕರು ನಿಯಮವನ್ನು ಉಲ್ಲಂಘಿಸುತ್ತಿರುವುದು ವಿಷಾದನೀಯ.

Leave a Comment