ಟಾಲಿವುಡ್ ನಲ್ಲಿ ಅನನ್ಯ ಪಾಂಡೆ

ಮುಂಬೈ, ಜ. 20 – ಬಾಲಿವುಡ್ ನಟಿ ಅನನ್ಯ ಪಾಂಡೆ, ಬಾಲಿವುಡ್ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.

ಕಳೆದ ವರ್ಷ ಸ್ಟೂಡೆಂಟ್ ಆಫ್ ದಿ ಇಯರ್ -2 ಚಿತ್ರರಂಗದ ಮೂಲಕ ಅನನ್ಯ ಬಿಟೌನ್ ಗೆ ಪಾದಾರ್ಪಣೆ ಮಾಡಿದ್ದರು.

 ತೆಲುಗಿನ ಫೈಟರ್ ಚಿತ್ರದಲ್ಲಿ ಅನನ್ಯ ಪಾಂಡೆ, ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಅವರ ಜೊತೆಯಲ್ಲಿ‌‌ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ ಎಂಬ ಚರ್ಚೆಯೊಂದು ನಡೆಯುತ್ತಿದೆ.

ನಿರ್ದೇಶಕ ಪುರಿ ಜಗನ್ನಾಥ್ ಈ ಪಾತ್ರಕ್ಕಾಗಿ ಮೊದಲು ಧಡಕ್ ಬೆಡಗಿ ಜಾಹ್ನವಿ ಕಪೂರ್ ಅವರೊಂದಿಗೆ ಮಾತುಕತೆಯು ನಡೆಸಿದ್ದರಂತೆ. ಆದರೆ, ಜಾಹ್ನವಿ ಈ ಪಾತ್ರಕ್ಕಾಗಿ  3.5 ಕೋಟಿ ರೂ ಬೇಡಿಕೆ ಇಟ್ಟಿದ್ದರಂತೆ. ನಂತರ ದಿನಾಂಕ ಹೊಂದಿಸಲು ಆಗದ‌ ಕಾರಣ ಜಾಹ್ನವಿ ಈ ಚಿತ್ರದಿಂದ ಹೊರಬರಬೇಕಾಯಿತು ಎನ್ನಲಾಗಿದೆ. ಇದೀಗ ಪಾತ್ರ ಅನನ್ಯ ಅವರ ಪಾಲಾಗಿದೆ‌.

 

Leave a Comment