ಟವರ್ ಅಳವಡಿಕೆಗೆ ಕೋರ್ಟ್ ಬ್ರೇಕ್

ಮೈಸೂರು, ಅ. 12- ನಗರದಲ್ಲಿ ಮೊಬೈಲ್ ಟವರ್ ಅಳವಡಿಕೆಗೆ ಸಾರ್ವಜನಿಕರು ವಿರೋಧ ವ್ಯಕ್ತಿಪಡಿಸಿದ್ದು, ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಟವರ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿ ನಗರದ ನ್ಯಾಯಾಲಯದಲ್ಲಿ ಸಾರ್ವಜನಿಕರು ದಾವೆ ಹೂಡಿದ್ದರು. ಸಾರ್ವಜನಿಕರ ಅರ್ಜಿಯನ್ನು ಪುರಸ್ಕರಿಸಿ ನಗರದ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯವು ಟವರ್ ಅಳವಡಿಕೆಗೆ ತಡೆಯಾಜ್ಞೆ ನೀಡಿದೆ.
ಮೈಸೂರಿನ ಗೋಕುಲಂ ೩ನೇ ಹಂತದಲ್ಲಿರುವ ಬಾಪೂಜಿ‌ ಅನಾಥ ಮಕ್ಕಳ ಮನೆ, ದಿವ್ಯಾ ಜ್ಯೋತಿ ಚಾರಿಟಬಲ್ ಟ್ರಸ್ಟ್ ಹಾಗೂ ಲಯನ್ಸ್ ಶಾಲೆಯ ಮಧ್ಯಭಾಗದಲ್ಲಿ ಜಿಯೋ ಕಂಪನಿಯ ಟವರ್ ಅಳವಡಿಕೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಮೈಸೂರಿನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Leave a Comment