ಟಕ್ಕರ್‌ಗೆ ಟಾಕಿ ಚಿತ್ರೀಕರಣ

ಹುಲಿರಾಯ ಸಿನಿಮಾದ ನಂತರ ನಾಗೇಶ್ ಕೋಗಿಲು ನಿರ್ಮಾಣದಲ್ಲಿತಯಾರಾಗುತ್ತಿರುವ ಎರಡನೇ ಚಿತ್ರ ಟಕ್ಕರ್. ದರ್ಶನ್ ಕುಟುಂಬದ ಪ್ರತಿಭೆ ಮನೋಜ್ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿರುವ ಸಿನಿಮಾ ಟಕ್ಕರ್. ಪುಟ್ಟಗೌರಿ ಮದುವೆ ಕಿರುತೆರೆ ಧಾರಾವಾಹಿಹುಡುಗಿ ರಂಜನಿ ರಾಘವನ್ ಚಿತ್ರದ ನಾಯಕಿ. ಮೈಸೂರಿನಲ್ಲಿ ಸತತ ಇಪ್ಪತ್ತೆಂಟು ದಿನಗಳ ಕಾಲ ಚಿತ್ರದ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ.

ಮೈಸೂರಿನ ಯುವರಾಜ ಕಾಲೇಜು, ಯೂನಿವರ್ಸಿಟಿ, ಅರಸು ಕ್ಲಬ್, ಎನ್.ಜೆ.ಎಸ್ ಆಸ್ಪತ್ರೆ, ಸಪ್ತ ಮಾತೃಕೆಯರ ದೇವಸ್ಥಾನ ಮತ್ತು ಹೈವೇ ಸರ್ಕಲ್ ಮನೆಯಲ್ಲಿ ಚಿತ್ರೀಕರಣ ನಡೆದಿದೆ. ಇನ್ನು ಸಾಹಸದೃಶ್ಯಗಳು ಬೆಂಗಳೂರಿನ ಕೆಂಗೇರಿ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆಸಲಾಗಿದ್ದು, ಕಂಠೀರವ ಸ್ಟುಡಿಯೋ, ಹೆಚ್.ಎಂ.ಟಿ. ಮತ್ತು ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಉಳಿದ ಭಾಗದ ಚಿತ್ರೀಕರಣ ನಡೆಸಲಾಗುವುದು ಎಂದು ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ.

ವಿಲಿಯಮ್ ಜಾನ್ ಡೇವಿಡ್ ಛಾಯಾಗ್ರಹಣವಿರುವ ಟಕ್ಕರ್ ಸಿನಿಮಾದಲ್ಲಿ ಹಿರಿಯ ನಟಿ ಸುಮಿತ್ರಾ, ಸಾಧು ಕೋಕಿಲಾ, ಭಜರಂಗಿ ಲೋಕಿ, ಈಟಿವಿ ಶ್ರೀಧರ್, ಮಾ. ಹಿತೈಷ್ ಗೌಡ, ಮಾ. ನಿಹಾಲ್ ಸಾಗರ್, ಕಾಮಿಡಿ ಕಿಲಾಡಿ ನಯನ, ಕುರಿ ಸುನಿಲ್, ಪ್ರವೀಣ್, ರಜನಿಕಾಂತ್ ಮುಂತಾದವರ ತಾರಾಗಣವಿದೆ. ರಘು ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

Leave a Comment