ಟಂಟಂ ಪಲ್ಟಿ: ಗರ್ಭಿಣಿ ಸಾವು,9 ಜನರಿಗೆ ಗಾಯ

ಕಲಬುರಗಿ,ಫೆ.19-ಟಂಟಂ ಪಲ್ಟಿಯಾಗಿ ಓರ್ವ ಗರ್ಭಿಣಿ ಸ್ಥಳದಲ್ಲಿಯೇ ಮೃತಪಟ್ಟು, ಒಂಬತ್ತು ಜನ ಗರ್ಭಿಣಿಯರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಸಂಚಾರಿ ಪೊಲೀಸ್ ಠಾಣೆ-2ರ ವ್ಯಾಪ್ತಿಯಲ್ಲಿ ಬರುವ ಅವರಾದ (ಬಿ) ಗ್ರಾಮದ ಬಳಿ ನಡೆದಿದೆ.

ಭೂಸಣಗಿ ಗ್ರಾಮದ ಪ್ರಿಯಾಂಕ ರಮೇಶ ಗಾಯಕವಾಡ (25) ಎಂಬುವವರು ಮೃತಪಟ್ಟಿದ್ದು, ಸಿದ್ದಮ್ಮ ನಾಗೇಂದ್ರ ಪೂಜಾರಿ, ಚನ್ನಮ್ಮ ಬಸವರಾಜ ಪೂಜಾರಿ, ಜ್ಯೋತಿ ಬಸಲಿಂಗಯ್ಯ ಹಿರೇಮಠ, ಶೈಲಜಾ ಮಲ್ಲಣ್ಣ ಅಷ್ಠಗಿ, ಮಹಾನಂದಾ ರಮೇಶ, ಸುಧಾ ತಿಪ್ಪಣ್ಣ, ಶರಣಮ್ಮ ಸಿದ್ದಣ್ಣ, ಅಂಜಮ್ಮ ಲಿಂಗರಾಜ ಮತ್ತು ಇರ್ಷಾದಾ ತಾಜುದ್ದೀನ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ ಇದೇ ಟಂಟಂನಲ್ಲಿ ಪ್ರಯಾಣಿಸುತ್ತಿದ್ದ ಕಾಶಿಬಾಯಿ ಮತ್ತು ಕಸ್ತೂರಬಾಯಿ ಎಂಬುವವರು ಸಹ ಗಾಯಗೊಂಡಿದ್ದಾರೆ.

ಕಣ್ಣೂರ-ಭೂಸಣಗಿ ಗ್ರಾಮದ ಒಟ್ಟು 10 ಜನ ಗರ್ಭಿಣಿಯರು ಅವರಾದ (ಬಿ) ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆಂದು ಹೋಗಿ ಟಂಟಂನಲ್ಲಿ ಮರಳಿ ಬರುತ್ತಿದ್ದಾಗ ಅವರಾದ (ಬಿ) ಹೊರವಲಯದಲ್ಲಿ ದನ ಅಡ್ಡಬಂದ ಕಾರಣ ಟಂಟಂ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment