ಟಂಟಂ ಪಲ್ಟಿ : ಓರ್ವ ಸಾವು

 

ಬಸವನಬಾಗೇವಾಡಿ,ಜ.11-ಪಟ್ಟಣದ ನ್ಯಾಯಾಲಯ ರಸ್ತೆಯಲ್ಲಿ ಹತ್ತಿ ತುಂಬಿಕೊಂಡು ಹೊರಟಿದ್ದ ಟಂಟಂ ಪಲ್ಟಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ 9.30ರ ಸುಮಾರಿಗೆ ನಡೆದಿದೆ.

ಮೃತನನ್ನು ಸಾಹೇಬಗೌಡ (60) ಎಂದು ಗುರುತಿಸಲಾಗಿದೆ. ಕೊಡೆಪ್ಪ ಗೂಳಪ್ಪ ತಮಿದಡ್ಡಿ (60), ಸಿದ್ದನಗೌಡ ಬಾಪುಗೌಡ ಬಂಟನೂರ (32), ನಾಗಪ್ಪ ಚಂದಪ್ಪ ದೊಡ್ಡಮನಿ (62) ಮತ್ತು ಭೀಮಣ್ಣ ಹಣಮಂತ ವಜ್ಜರ್ (26) ಎಂಬುವವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment