ಝಾನ್ಸಿಗೆ ಹಾಡಿನ ಜಾತ್ರೆ

ಹಿರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಕೆ.ಕಲ್ಯಾಣ್  ಬರೆದಿರುವ  ‘ಕೇಳಿದ್ದು ಕೊಡುವ ದಮ್ಮಿರೋ ದೇವ್ರೆ ನೀನೊಬ್ಬನೇ ಗಣಪ’ ಎನ್ನುವ ಹಾಡಿಗೆ ಲಕ್ಷೀ ರೈ ಗುಂಪಿನೊಂದಿಗೆ  ಹೆಜ್ಜೆ ಹಾಕುತ್ತಿದ್ದರು. ಅದನ್ನು ನೋಡಲು ಜನ ಜಾತ್ರೆಯಂತೆ ಜಮಾಯಿಸಿತ್ತು.

jhansi_127

ಝಾನ್ಸಿ ಚಿತ್ರಕ್ಕಾಗಿ ನೃತ್ಯ ನಿರ್ದೇಶಕ ಧನ್‌ಕುಮಾರ್ ಸಲಹೆಯಂತೆ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಬಳಿಕ ನಿರ್ದೇಶಕ ಗುರುಪ್ರಸಾದ್ ಮೈಕ್ ಕೈಗೆತ್ತಿಕೊಂಡು, ಅಧಿಕಾರದ ಶಿಪಾರಸ್ಸು ಇರುವರೊಬ್ಬರು ಇಲ್ಲಿರುವ ಜಾಗವನ್ನು ಕಬಳಿಸಲು ಪ್ರಯತ್ನ ಮಾಡುತ್ತಾರೆ.  ಸ್ಲಂ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಬಾಂಬ್ ಇಟ್ಟರೆ  ಖಾಲಿ ಮಾಡುವರೆಂದು ಒಂದು ಸ್ಥಳದಲ್ಲಿ ಇಡುತ್ತಾರೆ. ಅಲ್ಲೆ ಹುಟ್ಟಿ ಬೆಳದ ಝಾನ್ಸಿ  ಯೋಜನೆಯನ್ನು ದ್ವಂಸ ಮಾಡುತ್ತಾಳೆ.

ಮುಂದೆ ಖುಷಿಯಿಂದ ಗಣೇಶನ ಹಾಡು ಬರುವುದರೊಂದಿಗೆ ನಾಯಕಿಯ ಪರಿಚಯವಾಗುತ್ತದೆ. ಹಾಡಿಗೆ ಪುನೀತ್‌ರಾಜ್‌ಕುಮಾರ್ ಧ್ವನಿಯಾಗಲಿದ್ದಾರೆ. ಪಕ್ಕಾ ಆಕ್ಷನ್ ಚಿತ್ರವಾಗಿದ್ದು, ಕತೆಯಲ್ಲಿ  ಡ್ರಗ್ಸ್ ಮಾಫಿಯಾ, ಆಕೆಯ ಜೀವನದಲ್ಲಿ ನಡೆದ ಘಟನೆಗೆ ಸೇಡು ತೀರಿಸಿಕೊಳ್ಳುವುದು, ನಾಡು-ಮನೆಗಳನ್ನು ಉಳಿಸಲು ಏನೇನು ಮಾಡುತ್ತಾರೆ ಎಂಬುದನ್ನು ಹೇಳಲಾಗುವುದು.

ಝಾನ್ಸಿ ಯಾರು, ಏತಕ್ಕೆ ಇಲ್ಲಿಗೆ ಬಂದರು, ಯಾವ ಉದ್ದೇಶಕ್ಕಾಗಿ ಹೋರಾಟ ಮಾಡುತ್ತಾರೆ ಎಂಬುದು ಕ್ಲೈಮಾಕ್ಸ್‌ನಲ್ಲಿ ತಿಳಿಯಲಿದೆ ಎಂದರು.ರವಿಕಾಳೆ  ಮೂರು ದಿವಸ ಭಾಗವಹಿಸಿದ್ದಾರೆ. ಬಾಲಿವುಡ್ ನಟ ಮುಖೇಶ್‌ರಿಷಿ ಮುಂದಿನ ದಿನಗಳಲ್ಲಿ ತಂಡಕ್ಕೆ ಬರಲಿದ್ದಾರೆ. ನಾಲ್ಕು ಅದ್ದೂರಿ ಫೈಟ್ ಮತ್ತು ಒಂದು ಭರ್ಜರಿ ಚೇಸಿಂಗ್ ಇರಲಿದೆ ಎಂದರು.  ನಟಿ ಲಕ್ಷ್ಮಿ ರೈ,ಇಷ್ಟದ ದೇವರು ಗಣೇಶ. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದು ನನಗೆ ಸಿಕ್ಕ ಅದೃಷ್ಟ.  ಪ್ರಸಕ್ತ  ನಾಯಕಿ ಪ್ರಧಾನ ಚಿತ್ರಗಳು ಬರುತ್ತಿರುವುದು ಖುಷಿ ತಂದಿದೆ. ಪಾತ್ರವು ಬೇರೆ ರೀತಿ,ರೂಪದಲ್ಲಿ  ರೌಡಿ, ಕಾಪ್ ಅಂತ ಎಲ್ಲವು

ಕೊನೆಯಲ್ಲಿ ತಿಳಿಯುತ್ತದೆ. ರಿಯಲ್ ಆಗಿ ಯಾರಿಗೂ ಹೆದರದ ನಾನು ನೇರಸ್ವಭಾವದವಳು. ಇದನ್ನು ರೀಲ್‌ನಲ್ಲಿ ಮಾಡುತ್ತಿದ್ದೇನೆ ಎಂದರು.

manu-no-67_165

ದೆವ್ವದ ಮನೆ

ಕನ್ನಡದಲ್ಲಿ ಇತ್ತೀಚೆಗ ಹಾರರ್ ಥ್ರಿಲ್ಲರ್ ಚಿತ್ರಗಳೇ ಹೆಚ್ಚು ಸದ್ದು ಮಾಡುತ್ತಿವೆ. ಇದೀಗ ಇಂತಹುದೇ ಕತೆ ಹೊಂದಿರುವ ‘ಮನೆ ನಂಬರ್ ೬೭’ ಚಿತ್ರ ಸೆಟ್ಟೇರಿದೆ. ಕಳೆದ ಹತ್ತು ವರ್ಷಗಳಿಮದ ಎಎಫ್‌ಎಕ್ಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಜಯಕುಮಾರ್ ಇದೇ ಮೊದಲ ಬಾರಿಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

manu-no-67_140ಅನಿವಾಸಿ ಭಾರತೀಯ ಗಣೇಶನ್ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ. ಸತ್ಯ ಅಜಿತ್ ನಾಯಕನಾಗಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಗಾಯತ್ರಿ ಮತ್ತು ಸಪ್ನ , ಸುಮಿತ್ರಾ ಮತ್ತು ವಾಸಂತಿ ಇದ್ದಾರೆ.

ಚಿತ್ರದ ಬಗ್ಗೆ ವಿವರ ನೀಡಿದ ನಿರ್ದೇಶಕ ಜಯಕುಮಾರ್, ನೈಝ ಘಟನೆಯನ್ನಾಧರಿಸಿ ಹಾರರ್ ಚಿತ್ರ ಮಾಡಲಾಗುತ್ತಿದೆ.ಹಳ್ಳಿಯಿಂದ ನಗರಕ್ಕೆ ಬರುವ ಇಂಜಿನಿಯರ್ ವಿದ್ಯಾರ್ಥಿ, ಬ್ರೋಕರ್ ಮೂಲಕ ಮನೆಯೊಂದನ್ನು ಬಾಡಿಗೆ ಪಡೆಯುತ್ತಾನೆ. ಆ ಮನೆಯಲ್ಲಿ ನಡೆಯುವ ಘಟನೆಗಳನ್ನೇ ಪ್ರಮುಖವಾಗಿರಿಸಿಕೊಂಡು ಚಿತ್ರೀಕರಿಸಲಾಗಿದೆ. ಹಲಸೂರಿನ ಗೌತಮ ಪುರದ ಘಟನೆ ಚಿತ್ರದ ಮೂಲಕ ಕಥಾಹಂದರ ಎಂದು ವಿವರ ನೀಡಿದರು.

manu-no-67_147

ಜನರಿಗೆ ಇಷ್ಟವಾಗುವ ಚಿತ್ರ ನೀಡುವ ಉದ್ದೇಶ ನಮ್ಮದು ಹೀಗಾಗಿ ತಂಡ ಇಂತಹದೊಂದು ಪ್ರಯತ್ನ ಮಾಡಿದೆ. ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.ನಾಯಕ ಸತ್ಯ ಅಜಿತ್, ಚಿತ್ರದಲ್ಲಿ ಇದೆ ಅಂದರೆ ಇದೆ. ಇಲ್ಲ ಅಂದರೆ ಮತ್ತೇನೋ ಆಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನಾಧರಿಸಿ ಚಿತ್ರ ಮಾಡಲಾಗಿದೆ ಎಂದರೆ ನಾಯಕಿಯರೂ ಕೂಡ ಒಳ್ಳೆಯ ಚಿತ್ರವಾಗಲಿದೆ ಎಂದರು.

Leave a Comment