ಜ.31 ರಂದು ಸಾಮೂಹಿಕ ಉಪನಯನ

ರಾಯಚೂರು.ಜ.21- ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಜನವರಿ 31 ರಂದು ಉಚಿತ ಸಾಮೂಹಿಕ ಉಪನಯನ ಹಾಗೂ ಬ್ರಹ್ಮೋಪದೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗುರು ವಿಶ್ವಕರ್ಮ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಜನವರಿ 31ರಂದು ದೇವದುರ್ಗ ಪಟ್ಟಣದ ಶ್ರೀಮತ್ ಆನೆಗುಂದಿ ಸಂಸ್ಥಾನ ಸರಸ್ವತಿ ಮೂಲ ಪೀಠದ ದೇವದುರ್ಗದಲ್ಲಿ ಉಚಿತ ಸಾಮೂಹಿಕ ಉಪನಯನ ಬ್ರಹ್ಮೋಪದೇಶ ಕಾರ್ಯಕ್ರಮವನ್ನು ಶ್ರೀ ಮೌನೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರಗಲಿದ್ದು ವಿಶ್ವಕರ್ಮ ಸಮಾಜ ಬಾಂಧವರು ದಿನಾಂಕ 25 ರೊಳಗೆ ಉಪನಯನಕ್ಕೆ ನೊಂದಣಿಯನ್ನು ಮಾಡಿಸಬೇಕು.
ಈ ಕಾರ್ಯಕ್ರಮವು ಸಮಾಜದಿಂದ ವಿಶಿಷ್ಟ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು ಹೆಚ್ಚಿನ ಮಾಹಿತಿಗಾಗಿ 9731573151,9482385959 ಕೆ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷರಾದ ಮಾರುತಿ ಬಡಿಗೇರ ,ರಾಮು ,ವೀರೇಶ್ ಬಡಿಗೇರ್, ಮಲ್ಲಪ್ಪ ,ನಗುಣ ಪತ್ತರ್ ಸೇರಿದಂತೆ ತಲುಪಿಸುತ್ತಿದ್ದರು.

Leave a Comment