ಜ.20ರಿಂದ ಕಣ್ಣಿನ ತಪಾಸಣಾ ಶಿಬಿರ

ಮೈಸೂರು. ಜ.17: ರೋಟರಿ ಐವರಿ ಸಿಟಿ ,ರೋಟರಿ ಇ ಕ್ಲಬ್ ಬೆಂಗಳೂರು, ಮೆಡಿಕಲ್ ಒಪ್ಟಿಕಲ್ ಏಡ್ ಸಂಯುಕ್ತಾಶ್ರಯದಲ್ಲಿ ಕಣ್ಣಿನ ತಪಾಸಣಾ ಶಿಬಿರ ಮತ್ತು ದೇಹದ ಸಾಮಾನ್ಯ ರೋಗಗಳ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಡಾ.ರವಿಶಂಕರ್ ಮಾಹಿತಿ ನೀಡಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜಯಲಕ್ಷ್ಮಿಪುರಂನಲ್ಲಿರುವ ಶ್ರೀ ಸತ್ಯಸಾಯಿಬಾಬಾ ಶಾಲೆಯಲ್ಲಿ ಜ.20 ರಿಂದ 23 ರವರಗೆ ತಪಾಸಣೆ ನಡೆಯಲಿದೆ.ಇಂಗ್ಲೆಂಡಿನ ಕನ್ನಡಕದ ತಜ್ಞರು ಮತ್ತು ವೈದ್ಯರುಗಳು ಮೈಸೂರಿನ ಕನ್ನಡಕದ ತಜ್ಞರು ಮತ್ತು ವೈದ್ಯರುಗಳು ತಪಾಸಣೆ ಮಾಡಲಿದ್ದಾರೆ.
ಕಣ್ಣಿನ ಪರೀಕ್ಷೆ ಮತ್ತು ಕನ್ನಡಕದ ಪರೀಕ್ಷೆ -ಅಗತ್ಯವಿರುವವರಿಗೆ ಉಚಿತ ಕನ್ನಡಕಗಳನ್ನು ಕೊಡಲಾಗುವುದು . ದೇಹದ ಸಾಮಾನ್ಯ ಪರೀಕ್ಷೆ / ತಪಾಸಣೆ , ಅಗತ್ಯವಿರುವವರಿಗೆ ಉಚಿತವಾಗಿ ಔಷಧಿಗಳನ್ನು ಕೊಡಲಾಗುವುದು. ಕಣ್ಣಿನ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಸೇವೆಗೆ ಇಲ್ಲಿ ವ್ಯವಸ್ಥೆ ಮಾಡಲಾಗುವುದು . ಉಷಾಕಿರಣ್ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯಲ್ಲಿ ದೇಹದ ಬೇರೆ ಯಾವುದೇ ಸಮಸ್ಯೆ ಇರುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ರೋಗಿಗಳು ಈ ಶಿಬಿರದ ನಂತರ ಚಿಕಿತ್ಸೆಗೆ ತಮಗೆ ಇಷ್ಟವಾದ ಆಸ್ಪತ್ರೆಗೆ ಹೋಗಬಹುದಾಗಿದೆ. ಪ್ರತಿನಿತ್ಯ ಮೊದಲು ಬರುವ 250 ರೋಗಿಗಳಿಗೆ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಲಾಗುವುದು . ಮೊದಲು ಬಂದವರಿಗೆ ಆದ್ಯತೆ , ಅಪಾಯಿಂಟ್ ಮೆಂಟ್ ಇರುವುದಿಲ್ಲ ಬರುವ ರೋಗಿಗಳು ತಾಳ್ಮೆಯಿಂದ ತಮ್ಮ ಸರದಿಗಾಗಿ ಕಾಯಬೇಕು. ರೋಗಿಗಳು ತಮ್ಮ ಕಣ್ಣಿನ, ದೇಹದ ಹಳೆಯ ಪರೀಕ್ಷೆಯ ಚೀಟಿಗಳಿದ್ದರೆ ಅದನ್ನು ತೆಗೆದುಕೊಂಡು ಬರಬೇಕು. ಸಕ್ಕರೆ ಖಾಯಿಲೆ ಇರುವವರು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವ ಅಗತ್ಯ ಇರುವುದರಿಂದ ತಮ್ಮ ಆಹಾರವನ್ನು ತರುವುದು ಉತ್ತಮ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಾಲಚಂದ್ರ,ಸುನೀಲ್ ಬಳಿಗ,ಮೋಹನ್, ಬಿಜಿ ನಾಗರಾಜು ಹಾಜರಿದ್ದರು.

Leave a Comment