ಜ.17 ರಂದು `ಯುವ ದಿನಾಚರಣೆ’ ಕಾರ್ಯಕ್ರಮ

ಪಾಂಡವಪುರ: ಜ:12- ತಾಲೂಕು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಯುವ ದಿನಾಚರಣೆ, ಮತದಾರರ ದಿನಾಚರಣೆ ಹಾಗೂ ಸ್ಚಚ್ಚತಾ ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಜೆಎಂಎಫ್‍ಸಿ ಅಪಾರ ಹಿರಿಯ ಶ್ರೇಣಿ ನ್ಯಾಯಾಧೀಶೆ ಎಂ.ಭಾರತಿ ತಿಳಿಸಿದರು.
ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನು ಸೇವಾ ಪ್ರಾಧಿಕಾರದಿಂದ ಪ್ರತಿವರ್ಷವೂ ಜನವರಿ ತಿಂಗಳಲ್ಲಿ ಯುವ ದಿನಾಚರಣೆ, ಮತದಾರರ ದಿನಾಚರಣೆ ಹಾಗೂ ಸ್ಚಚ್ಚತಾ ಜಾಗೃತಿ ದಿನಾಚರಣೆ ನಡೆಸಬೇಕಾಗಿದೆ ಹಾಗಾಗಿ ಜ.17ರಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ `ಯುವ ದಿನಾಚರಣೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ದುಶ್ವಟಕ್ಕೆ ಒಳಗಾಗುತ್ತಿರುವ ಯುವಕರಿಗೆ ಜಾಗೃತಿ ಮೂಡಿಸಲಾಗುವುದು ಹಾಗಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರು ಪಾಲ್ಗೊಳ್ಳವಂತೆ ಮಾಡಬೇಕು ಎಂದು ಸರಕಾರಿ ಪ್ರಥಮ ದರ್ಜೆ ಪ್ರಾಂಶುಪಾಲ ಡಾ.ಬಿ.ಟಿ.ರಜಿನಿಕಾಂತ್ ಅವರಿಗೆ ಸೂಚಿಸಿದರು.
ಜ.26ರಂದು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ `ಮತದಾರರ ದಿನಾಚರಣೆ’ ನಡೆಸಿ ಮತದಾರರಿಗೆ ಮತದಾನ ಹಾಗೂ ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜತೆಗೆ ಮತದಾನದ ಹಕ್ಕಿನ ಬಗ್ಗೆಯೂ ಯುವ ಮತದಾರರಿಗೆ ತಿಳಿಸಿಕೊಡಲಾಗುವುದು. ಜ.30ರಂದು ಬಸವನಗುಡಿಯ ದರ್ಗ ಬಡಾವಣೆಯಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ. ಈ ಕಾರ್ಯಕ್ರಮದಲ್ಲಿ ಸ್ವಚ್ಚತೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವಂತೆ ಪುರಸಭೆಯ ಅಧಿಕಾರಿಗಳು ಹೆಚ್ಚಿನ ಪ್ರಚಾರಮಾಡಿ ಸಾರ್ವಜನಿಕರು ಭಾಗವಹಿಸುವಂತೆ ಮಾಡಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಫೆ.20ರಂದು `ವಿಶ್ವನ್ಯಾಯ’ ದಿನಾಚರಣೆಯನ್ನು ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಮೂಲಕ ಸಾಮಾಜಿಕ ಬಡತನ ನಿರ್ಮೂಲನೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಲಾಗುವುದು. ಗ್ರಾಮೀಣ ಪ್ರದೇಶದ ಜನರಲ್ಲಿರುವ ಬಡತನ, ಕೀಳಿರಿಮೆಯನ್ನು ಹೋಗಲಾಡಿಸುವ ಅರಿವು ಮೂಡಿಸಲಾಗುವುದು. ಫೆ.26ರಂದು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರಿಗೆ ರಾಜೀಸಂದಾನದ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಜೆಎಂಎಫ್‍ಸಿ ಕಿರಿಯ ಶ್ರೇಣಿ ನ್ಯಾಯಾಧೀಶ ಜಗದೀಶ್‍ಬಿಸೇರೊಟ್ಟಿ ಹಾಜರಿದ್ದರು.

Leave a Comment