ಜ. 13 ರಿಂದ ಸಂಕ್ರಾಂತಿ ನಾಟಕೋತ್ಸವ

ತುಮಕೂರು, ಜ. ೧೩- ಪ್ರಯೋಗದಾಟಗಳ ರಂಗಕೇಂದ್ರ ನಾಟಕಮನೆ ತುಮಕೂರು ವತಿಯಿಂದ ಸಂಕ್ರಾಂತಿ ನಾಟಕೋತ್ಸವವನ್ನು ಶಿರಾಗೇಟ್‍ನ ಚಾಮುಂಡೇಶ್ವರಿ ನಗರ ಸಿಟಿ ಕ್ಲಬ್ ಹತ್ತಿರವಿರುವ ನಾಟಕಮನೆ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ ಜ. 13, 14 ಮತ್ತು 15 ರಂದು ಸಂಜೆ 6 ಗಂಟೆಗೆ ತಲಾ ಎರಡು ನಾಟಕಗಳಂತೆ ಆರು ವಿಭಿನ್ನ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಜ. 13 ರಂದು ಸಂಜೆ 6 ಗಂಟೆಗೆ ನಡೆಯುವ ಸಂಕ್ರಾಂತಿ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಸಿ ಪ್ರಸಿದ್ದಿಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ಪಾಲಿಕೆ ಸದಸ್ಯ ಮಹೇಶ್ ವಹಿಸುವರು. ಸಂಕ್ರಾಂತಿ ನಾಟಕೋತ್ಸವಕ್ಕೆ ಹಿರಿಯ ರಂಗನಿರ್ದೇಶಕ ಭೀಮಸೇನ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಂದನ ನಾಗರಿಕ ವೇದಿಕೆ, ಚಾಮುಂಡೇಶ್ವರಿ ನಗರ ಅಧ್ಯಕ್ಷರಾದ ಡಿ.ವಿ.ಶೇಷಾಚಲ, ರಂಗಕಲಾವಿದರಾದ ಕುಂಭಿನರಸಯ್ಯ ಉಪಸ್ಥಿತರಿರುವರು.

ಜ. 14 ರಂದು ಸಂಜೆ 6 ಗಂಟೆಗೆ ದ.ರಾ. ಬೇಂದ್ರ ಅವರ ಎರಡು ನಾಟಕಗಳಾದ “ದೆವ್ವನಮನೆ” ಕಾಂತರಾಜು ಕೌತುಮಾರನಹಳ್ಳಿ ಅವರ ನಿರ್ದೇಶನದಲ್ಲಿ ಮತ್ತು “ಸಾಯೋಆಟ” ರವಿಶಂಕರ್ ರಂಗಾಯಣ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿವೆ.

ಜ. 15 ರಂದು ಸಂಜೆ 6 ಗಂಟೆಗೆ ಹೊರೆಯಾಲ ದೊರೆಸ್ವಾಮಿ ರಚಿತ “ಸಿದ್ದಮಾದೇಶ” ಮತ್ತು ಪಿ.ಲಂಕೇಶ್ ಅವರ “ತೆರೆಗಳು”ನಾಟಕಗಳು ಕಾಂತರಾಜು ಕೌತುಮಾರನಹಳ್ಳಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿವೆ.

ಹೊಸ ನಾಟಕಗಳನ್ನು ರಂಗಕ್ಕೆ ಅಳವಡಿಸುವುದರ ಜತೆಗೆ, ಹೊಸ ತಂತ್ರಜ್ಞರು, ಕಲಾವಿದರನ್ನು ಕನ್ನಡ ರಂಗಭೂಮಿಗೆ ಪರಿಚಯಿಸುತ್ತಾ, ಸದಾ ಚಟುವಟಿಕೆಯಲ್ಲಿ ತೊಡಗಿರುವ ನಾಟಕಮನೆ ತುಮಕೂರು ಹಮ್ಮಿಕೊಂಡಿರುವ ಈ ಮೂರು ದಿನಗಳ ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದ್ದು, ಕಲಾವಿದರು, ಬಡಾವಣೆಯ ರಂಗಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕಮನೆಯ ಸಂಕ್ರಾಂತಿ ನಾಟಕೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ರಂಗಸಂಘಟಕ ಹಾಗೂ ನಾಟಕಮನೆ ಕಾರ್ಯನಿವಾಹಕ ಟ್ರಸ್ಟಿ ನಾಟಕ ಮನೆ ಮಹಾಲಿಂಗು (ದೂ. 9448064954) ಮನವಿ ಮಾಡಿದ್ದಾರೆ.

Leave a Comment