ಜ. ೧೨ ಹಾಲುಮತ ಸಂಸ್ಕೃಂತಿ ವೈಭವ ಕಾರ್ಯಕ್ರಮ

ಬೆಂಗಳೂರು, ಜ. ೮- ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ವತಿಯಿಂದ ಜನವರಿ 12, 13 ಹಾಗೂ 14 ರಂದು ಹಾಲುಮತ ಸಂಸ್ಕೃಂತಿ ವೈಭವ – 2019 ಕಾರ್ಯಕ್ರಮವನ್ನು ವೈಭವಯುತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 12 ರಂದು ಬೆಳಿಗ್ಗೆ 11-30ಕ್ಕೆ ಯುವಜನ ಸಮಾವೇಶವನ್ನು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾ ನಂದಪುರಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಚ್.ಎಂ. ರೇವಣ್ಣ ವಹಿಸಲಿದ್ದಾರೆ.
ಪೌರಾಡಳಿತ ಸಚಿವ ಶಿವಳ್ಳಿ, ಸಚಿವ ಪುಟ್ಟರಂಗ ಶೆಟ್ಟಿ, ಮುಜರಾಯಿ ಸಚಿವ ಪರಮೇಶ್ವರ ನಾಯಕ್, ಶಾಸಕರಾದ ಬೈರತಿ ಸುರೇಶ್, ಬೈರತಿ ಬಸವರಾಜ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ಡಾ. ಪರಮೇಶ್, ಡಾ. ವಿಜಯಲಕ್ಷ್ಮೀ ಪರಮೇಶ್, ಡಾ. ಶ್ರೀನಿವಾಸ ಅವರನ್ನು ಸನ್ಮಾನಿಸಲಾಗುವುದು ಎಂದರು.
ಜನವರಿ 13 ರಂದು ಬೆಳಿಗ್ಗೆ 11-30ಕ್ಕೆ ನೌಕರರ ಸಮಾವೇಶವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಸದಾನಂದಗೌಡ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಸಚಿವರಾದ ವೆಂಕಟರಾಮ ನಾಡಗೌಡ, ಸಚಿವ ಪ್ರಿಯಾಂಕ್ ಖರ್ಗೆ, ಬೀದರ್ ಜಿ.ಪಂ ಅಧ್ಯಕ್ಷ ಭಾರತಿ ಬಾಯಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜನವರಿ 14 ರಂದು ಬೆಳಿಗ್ಗೆ 11-30ಕ್ಕೆ ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಹಾರಾಷ್ಟ್ರದ ಮೀನುಗಾರಿಕೆ ಸಚಿವ ಮಹಾದೇವ ಜಾನಕಾರ ಉದ್ಘಾಟಿಸಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಶಾಂತವೀರಗುರು ಮುರುಘರಾಜೇಂದ್ರ, ಶ್ರೀ ಸೊಮಲಿಂಗ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಸಂಸದ ವಿರು ಪಾಕ್ಷಪ್ಪ ವಹಿಸಲಿದ್ದಾರೆ.
ಈ ಮೂರು ದಿನಗಳ ಕಾಲ ನಡೆಯಲಿರುವ ಹಾಲುಮತ ಸಂಸ್ಕೃಂತಿ ವೈಭವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು, ಸಾಂಸ್ಕೃಂತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.

ಬಾಕ್ಸ್:
ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಪಟ್ಟಿಯಲ್ಲಿ ಗೊಂದಲ ಸಲ್ಲದು. ಸಚಿವ ರೇವಣ್ಣ ಅವರು ಹಿರಿಯರಾಗಿದ್ದು, ಎಲ್ಲಾ ವಿಷಯಗಳಲ್ಲೂ ಮೂಗು ತೋರಿಸುವ ಪ್ರವೃತ್ತಿ ನಿಲ್ಲಿಸಬೇಕು. ರಾಹುಲ್ ಗಾಂಧಿ ಅವರ ಆಯ್ಕೆ ಪಟ್ಟಿಗೆ ಸಿ.ಎಂ ಅಂಕಿತ ಹಾಕುವ ಬದ್ದತೆ ತೋರಿಸಬೇಕು ಎಂದು ಮಾಜಿ ಸಚಿವ ರೇವಣ್ಣ ಒತ್ತಾಯಿಸಿದ್ದಾರೆ.
ಜೆ.ಡಿ.ಎಸ್ ನಲ್ಲಿ ಇತ್ತೀಚೆಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅವರಲ್ಲಿ ಶಿಸ್ತು ಎಂಬುದೇ ಇಲ್ಲ. ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದು, ಮೈತ್ರಿ ಧರ್ಮ ಪಾಲನೆ ಅಗತ್ಯ. ಒಂದೇ ಆಡಳಿತದಲ್ಲಿ ಒಂದೇ ನಾಣ್ಯದ ಎರೆಡು ಮುಖಗಳಾಗಿರುವ ಎರೆಡೂ ಪಕ್ಷಗಳು ಸಣ್ಣಪುಟ್ಟ ಗೊಂದಲ ನಿವಾರಿಸಿ ಉತ್ತಮ ಆಡಳಿತ ನಡೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಪಟ್ಟಿ ವಿಚಾರದಲ್ಲಿ ಯಾರೂ ಮೂಗು ತೂರಿಸಬಾರದು. ಗೊಂದಲ ನಿವಾರಣೆಗಾಗಿ ಇಂದು ಕಾಂಗ್ರೆಸ್ ಉಸ್ತುವಾಗಿ ವೇಣುಗೋಪಾಲ್ ನಗರಕ್ಕೆ ಆಗಮಿಸಲಿದ್ದು, ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಸಂಬಂಧ ಯಾವುದೇ ರೀತಿಯ ವಿವಾದ ಸೃಷ್ಟಿಸುವುದು ಅನಗತ್ಯ ಎಂದು ಹೇಳಿದರು.

Leave a Comment