ಜ್ವರದ ಸುಸ್ತು ನಿವಾರಣೆಗೆ ಟಿಪ್ಸ್

ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸು ವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ ಜ್ಯೂಸ್ ಗಳನ್ನು ಸೇವಿಸಿ.

  • ಕಿತ್ತಳೆ ಅಥವಾ ಮೂಸಂಬಿಯಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಈ ಜ್ಯೂಸ್ ಸಹಕಾರಿಯಾಗಿದೆ.
  • ೧ ಬೀಟ್ ರೂಟ್, ೩ ಕ್ಯಾರೆಟ್, ೧ ಕಿತ್ತಳೆ, ೨ ಇಂಚಿನಷ್ಟು ದೊಡ್ಡದಿರುವ ಅರಿಶಿಣ, ಸ್ವಲ್ಪ ಶುಂಠಿ, ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಅರ್ಧ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ರುಬ್ಬಿ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.
  • ಸ್ಟ್ರಾಬೆರಿ ಮತ್ತು ಕಿವಿ ಫ್ರೂಟ್ ಜೊತೆ ೨ ಪುದೀನಾ ಎಲೆ ಹಾಕಿ ಜ್ಯೂಸ್ ಮಾಡಿ ಕುಡಿದರೆ ಸುಸ್ತು ಬೇಗನೆ ಕಡಿಮೆಯಾಗುವುದು. ಕಿವಿ ಫ್ರೂಟ್ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚುವಂತೆ ಮಾಡುತ್ತದೆ.
  • ಹಾಲಿಗೆ ಕುಂಬಳಕಾಯಿ ಬೀಜ ಹಾಕಿ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುತ್ತದೆ.
  • ಸೇಬು, ಕ್ಯಾರೆಟ್ ಮತ್ತು ಆರೆಂಜ್ ಮೂರನ್ನು ಮಿಕ್ಸ್ ಮಾಡಿ ಜ್ಯೂಸ್ ಕುಡಿದರೆ ಸುಸ್ತು ನಿವಾರಣೆ ಯಾಗುತ್ತದೆ.

Leave a Comment