ಜ್ಞಾನ ವೃದ್ಧಿಗೆ ಪುಸ್ತಕ ಅಧ್ಯಯನ ಅತ್ಯವಶ್ಯ

ಚಿಕ್ಕನಾಯಕನಹಳ್ಳಿ, ಜು. ೧೧- ವೈಯುಕ್ತಿಕ ಪುಸ್ತಕದ ಅಧ್ಯಯನದಿಂದ ಪರಿಪೂರ್ಣ ಶಾಶ್ವತ ಜ್ಞಾನ ಸಿಗುತ್ತದೆ ಹೊರತು ಕಂಪ್ಯೂಟರ್ ಆಗಲಿ, ಮೊಬೈಲ್‌ನಿಂದಾಗಲಿ ಜ್ಞಾನ ಲಭಿಸುವುದಿಲ್ಲ ಎಂದು ನಿವೃತ್ತ ಶಿಕ್ಷಕ ಶ್ರೀನಿವಾಸಮೂರ್ತಿ ಹೇಳಿದರು.

ಪಟ್ಟಣದ ತೀನಂಶ್ರೀ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಡೆಸಿದ ಓದುವ ತಿಂಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಂಥಾಲಯಗಳು ನಿಜವಾದ ಜ್ಞಾನದ ಭಂಡಾರವನ್ನು ಇಟ್ಟುಕೊಂಡಿದೆ. ಪೂರ್ವ ಕಾಲದಿಂದಲೂ ಮನುಷ್ಯನಿಗೆ ಅವಶ್ಯವಿರುವ ಜ್ಞಾನ ಸಂಪತ್ತು ಸಿಗುವ ಕೇಂದ್ರವಾಗಿದ್ದು, ಈ ಪೀಳಿಗೆಯಲ್ಲಿ ಮಕ್ಕಳು ಪುಸ್ತಕವನ್ನು ಓದುವ ಹವ್ಯಾಸ ಮಾಡದೆ ಸುಲಭವಾಗಿ ತಿಳಿಯಲು ಕಂಪ್ಯೂಟರ್ ಹಾಗೂ ಮೊಬೈಲ್‍ಗಳಿಗೆ ಹಾಸ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ನಂದೀಶ್ ಬಟ್ಲೇರಿ ಮಾತನಾಡಿ, ಮಕ್ಕಳು ಮೊಬೈಲ್‍ನಲ್ಲಿ ವ್ಯಾಟ್ಸ್‌ಆಫ್, ಫೇಸ್‌ಬುಕ್‌ನಲ್ಲಿ ತಲ್ಲೀನರಾಗಿರುತ್ತಾರೆ. ಇದರಿಂದ ಮಾನಸಿಕವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದರೆ ಪುಸ್ತಕಗಳು ದಿನ ಪತ್ರಿಕೆಗಳನ್ನು ಪ್ರತಿ ದಿವಸ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಪೀಳಿಗೆ ಜನರು ಪುಸ್ತಕ ಹಾಗು ಗ್ರಂಥಗಳನ್ನು ಓದಲು ಅವಕಾಶದ ವ್ಯವಸ್ಥೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಕಲ್ಪಿಸಿರುವುದು ಶ್ಲಾಘನೀಯ ಎಂದರು.

ಶಿಕ್ಷಕ ಎ.ಎಸ್.ಬಸವಲಿಂಗಯ್ಯ ಮಾತನಾಡಿ, ಪುಸ್ತಕ ವ್ಯಕ್ತಿಗೆ ಒಳ್ಳೆಯ ಸ್ನೇಹಿತ. ಒತ್ತಿಗೆಯಲ್ಲಿ ಒಂದು ತಲೆಮಾರಿನ ಚರಿತ್ರೆ ಅಡಕವಾಗಿರುತ್ತದೆ. ಗ್ರಂಥಾಲಯಕ್ಕೆ ಓದಲು ಹೆಚ್ಚಾಗಿ ಹಿರಿಯ ನಾಗರಿಕರೆ ಬರುತ್ತಾರೆ. ಪತ್ರಿಕೆಗಳು ಬೇಕಾದ ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಅರ್ಥಪೂರ್ಣವಾದ ಖಷಿ ಸಿಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಲಿಂಗದೇವರು ವಹಿಸಿದ್ದರು. ಶಂಕರಪ್ಪ, ಕೃಷ್ಣಮೂರ್ತಿ, ರವಿಕುಮಾರ್, ಶಂಕರಶೆಟ್ಟಿ, ತಿಮ್ಮಯ್ಯ, ಜಯಮ್ಮ ಹೊನ್ನೇಬಾಗಿ ರತ್ನಮ್ಮ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದು ಪ್ರತಿನಿತ್ಯ ಓದಲು ಬರುವ ಹಿರಿಯ ನಾಗರಿಕರನ್ನು ಓದುವ ತಿಂಗಳಿನ ಅಂಗವಾಗಿ ಅಭಿನಂದಿಸಲಾಯಿತು.

Leave a Comment