ಜೋಗಮ್ಮ, ಫಕೀರರಿಗೂ ಸರಕಾರ ನೆರವಾಗಲಿ

ಹುಬ್ಬಳ್ಳಿ,ಮೇ 26- ಲಾಕ್‌ಡೌನ್‌ನಿಂದ ಆರ್ಥಿಕ ಹಿಂಜರಿತ ಕಂಡಿರುವ ಕಾರ್ಮಿಕರಿಗೆ, ನೇಕಾರರಿಗೆ, ಶಿಂಪಿಗರಿಗೆ ಪರಿಹಾರ ಧನವನ್ನು ಮಂಜೂರಿ ಮಾಡಿದೆ. ಆದರೆ  ಯಾವುದೇ ಆಸರೆ ಇಲ್ಲದೆ ನಿರ್ಗತಿಕರಾಗಿ ಅಲೆದಾಡುತ್ತಿರುವ ಜೋಗಮ್ಮಗಳಿಗೆ, ಫಕೀರ ಜನರಿಗೆ ಹಾಗೂ ತಲೆಮಾರುಗಳಿಂದ ಭಿಕ್ಷಾಟನೆ ಮಾಡುತ್ತ ಬಂದಿರುವ ಭಿಕ್ಷುಕರಿಗೆ ಕಡೆಗಣಿಸಿದ್ದು, ಇವರಿಗೂ ಆರ್ಥಿಕ ನೆರವನ್ನು ನೀಡಬೇಕೆಂದು ಧಾರವಾಡ ಜಿಲ್ಲಾ ಜಯಭಾರತ ಜನಸೇವಾ ಸಂಘ ಸರಕಾರಕ್ಕೆ ಒತ್ತಾಯಿಸಿದೆ.
ಈಗಾಗಲೇ ಹಲವು ಸಮುದಾಯಗಳಿಗೆ ಸರಕಾರ ಆರ್ಥಿಕ ಪ್ಯಾಕೇಜ್‌ನ್ನು ಘೋಷಣೆ ಮಾಡಿದ್ದು, ಸದ್ಯ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಭಿಕ್ಷೆ ಸಿಗದೆ ಎಲ್ಲ ಜೋಗಮ್ಮಗಳು, ಫಕೀರ ಜನರು ತೀರಾ ಸಂಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.ಇವರಿಗೂ ವಿಶೇಷ ಪ್ಯಾಕೇಜ್ ಸರಕಾರ ನೀಡಬೇಕು.
ಸರಕಾರ ಕೆಲ ಸಮುದಾಯಗಳಿಗೆ ಸಹಾಯ ಮಾಡಿದ್ದು, ಇನ್ನು ಕೆಲವು ಸಮುದಾಯಗಳನ್ನು ಕಡೆಗಣಿಸಿದೆ. ಆದ್ದರಿಂದ ಮೇಲ್ಕಾಣಿಸಿದ ಸಮುದಾಯಗಳಿಗೂ ನೆರವು ನೀಡಬೇಕೆಂದು ಸಂಘದ ಅಧ್ಯಕ್ಷ ಐ.ಎಮ್.ತೊರಗಲ್ಲ ಹಾಗೂ ಪ್ರಕಾಶ ಕುಲಸೋಗಿ, ಶ್ರೀನಿವಾಸ ಮಾದಗುಂಡಿ, ರಸೂಲ ಯಲಿಗಾರ, ಕೆ.ಎ.ಧಾರವಾಡ, ಎ.ಕೆ.ಕಲಾದಗಿ, ಎಮ್.ಬಿ.ನಾಲಬಂದ, ಶರೀಫ ಕುನ್ನೂರ ಮುಂತಾದವರು ಸರಕಾರಕ್ಕೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Share

Leave a Comment