ಜೋಕೋವಿಚ್‌ಗೆ ಯುಸ್ ಓಪನ್ ಕಿರೀಟ

ನ್ಯೂಯಾರ್ಕ್, ಸೆ.೧೦-ಸರ್ಬಿಯಾದ ನೊವಾಕ್ ಜೋಕೊವಿಚ್ ಅಮೆರಿಕ ಮುಕ್ತ ಓಪನ್ ಟೆನ್ನಿಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಅಭೂತಪೂರ್ವ ಗೆಲುವಿನೊಂದಿಗೆ ಪೀಟ್ ಸಾಂಪ್ರಸ್ ಅವರ ೧೪ ಗ್ರಾಂಡ್ ಸ್ಲ್ಯಾಮ್‌ನ ಪ್ರಶಸ್ತಿಯನ್ನು ಸಮಗೊಳಿಸಿದ್ದಾರೆ.

ನಿನ್ನೆ ನ್ಯೂಯಾರ್ಕ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ ಪೆಟ್ರೊ ಅವರನ್ನು ೬-೩, ೭-೬, (೭/೪), ೬-೩ ಸೆಟ್‌ಗಳಿಂದ ಸೋಲಿಸಿ ಜೋಕೊವಿಚ್ ಪ್ರಶಸ್ತಿ ಗೆದ್ದುಕೊಂಡರು, ೨೦೧೧ ಹಾಗೂ ೦೧೫ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈಗ ಅವರು ನ್ಯೂಯಾರ್ಕ್‌ನಲ್ಲಿ ೮ನೇ ಫೈನಲ್ ಆಡಿದ ಕೀರ್ತಿಗೆ ಪಾತ್ರರಾದರು.

ಜೋಕೊವಿಚ್ ಎರಡನೇ ಸೆಟ್‌ನಲ್ಲಿ ೩-೧ ಮುನ್ನಡೆ ಸಾಧಿಸಿದ್ದರು. ಆನಂತರ ಡೆಲ್ ಪೆಟ್ರೊ ದಿಟ್ಟ ಆಟವಾಡಿ ಬ್ರೇಕ್ ಪಾಯಿಂಟ್ ಗಳಿಸುವ ಮೂಲಕ ೩-೩ರ ಸಮಬಲ ಸಾಧಿಸಿದರು.ತೀವ್ರ ಪೈಪೋಟಿಯಿಂದ ಕೂಡಿದ ಈ ಹಣಾಹಣಿಯಲ್ಲಿ ಅಂತಿಮವಾಗಿ ಜೋಕೊವಿಚ್ ಜಯಗಳಿಸಿ ಪ್ರತಿಷ್ಠಿತ ಯುಸ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಡೆಲ್ ಪಟ್ರೊ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು.

ಕಳೆದ ಬಾರಿ ಮೊಣಕೈಗೆ ಗಾಯ ಮಾಡಿಕೊಂಡಿದ್ದ ಜೋಕೊವಿಚ್ ಯುಸ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹೊರಗುಳಿದಿದ್ದರು.

Leave a Comment