ಜೊತೆ ಜೊತೆಯಲಿ ಧಾರವಾಹಿಗೂ 60 ಅಡಿ ಕಟೌಟ್ ನಿರ್ಮಾಣ

ಬೆಂಗಳೂರು, ಡಿ ೨೭- ಇದುವರೆಗೂ ಸೂಪರ್ ಹಿಟ್ ಚಿತ್ರಗಳ ನಾಯಕ, ನಾಯಕಿಯರು ಕಟೌಟ್ ನಿರ್ಮಿಸುತ್ತಿದ್ದನ್ನು ನೋಡಿದ್ದೇವೆ, ಆದರೆ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಜೊತೆ ಜೊತೆಯಲಿ ಧಾರವಾಹಿಗೂ ೬೦ ಅಡಿ ಕಟೌಟ್‌ನ್ನು ಅಭಿಮಾನಿಗಳು ನಿರ್ಮಿಸಿ ಸಂಭ್ರಮಿಸಿದ್ದಾರೆ.
ಜೊತೆ ಜೊತೆಯಲಿ ಧಾರವಾಹಿ ಆರಂಭವಾದ ದಿನದಿಂದ ಇಂದಿನವರೆಗೂ ಟಿಆರ್‌ಪಿ ಗಳಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದು, ಇದೀಗ ಬೃಹತ್ ಕಟೌಟ್ ನಿರ್ಮಾಣಗೊಂಡ ಮೊದಲ ಧಾರವಾಹಿ ಎನಿಸಿಕೊಂಡಿದೆ. ಇದುವರೆಗೂ ಯಾವ ಧಾರವಾಹಿಗೂ ಜನರು ಇಷ್ಟು ಪ್ರೀತಿ ತೋರಿಸಿಲ್ಲ ಎನ್ನಬಹುದು. ಧಾರವಾಹಿಯಲ್ಲಿ ನಟ ಅನಿರುದ್ಧ ಹಾಗೂ ನಟಿ ಮೇಘ ಶೆಟ್ಟಿ ಅವರ ಪಾತ್ರಕ್ಕೆ ಜನರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರತಿ ದಿನ ರಾತ್ರಿ ೮.೩೦ಕ್ಕೆ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿಯ ಟಿಆರ್‌ಪಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದ್ದು, ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಯವರ್ದನ್ ಹಾಗೂ ಅನು ಎಂಬ ಪಾತ್ರದ ೬೦ ಅಡಿ ಕಟೌಟ್ ಅನ್ನು ನಿಲ್ಲಿಸಿ ಅಭಿಮಾನಿಗಳು ಸಂಭ್ರಮಸಿದ್ದಾರೆ. ಈ ಕಾರ್ಯಕ್ರಮ ಇದೇ ಭಾನುವಾರ ಮಧ್ಯಾಹ್ನ ೩ ಗಂಟೆಗೆ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Leave a Comment